Humrahi

ರಾಗಿ ದೋಸೆ

ಬೇಕಾಗುವ ಪದಾರ್ಥಗಳು:

  • 1 ಕಪ್‌ ರಾಗಿ ಹಿಟ್ಟು
  • ¼ ಕಪ್‌ ಅಕ್ಕಿ ಹಿಟ್ಟು
  • ½ ಕಪ್‌ ರವೆ
  • ¼ಕಪ್‌ ಮೊಸರು
  • 2tsp ಹಚ್ಚಿದ ಶುಂಠಿ
  • 1 ಹಚ್ಚಿದ ಹಸಿರು ಮೆಣಸಿನಕಾಯಿ 
  • 1 ಟೇಬಲ್‌ ಸ್ಪೂನ್‌ ಜೀರಿಗೆ
  • ಬೇಕಾಗುವಷ್ಟು ನೀರು
  • ರುಚ್ಚಿಗೆ ತಕ್ಕಂತೆ ಉಪ್ಪು

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 210 ಕಿಲೋಕ್ಯಾಲರಿ
ಪ್ರೊಟೀನ್: 4 ಗ್ರಾಂ

ಮಾಡುವ ವಿಧಾನ:

  • ದೊಡ್ಡ ಬಟ್ಟಲನ್ನು ತೆಗೆದುಕೊಂಡು, ರಾಗಿ ಹಿಟ್ಟು, ಅಕ್ಕಿ ಹಿಟ್ಟು ಮತ್ತು ರವೆಯನ್ನು ಸೇರಿಸಿ. 
  • ಸ್ವಲ್ಪ ಮೊಸರು, ಹಚ್ಚಿ ಶುಂಠಿ, ಹಸಿರು ಮೆಣಸಿನಕಾಯಿ, ಜೀರಿಗೆ ಮತ್ತು ಉಪ್ಪುನ್ನು ಸೇರಿಸಿ.
  • ಈಗ ನೀರು ಸೇರಿಸಿ ಮತ್ತು ಕಲಿಸಿ. 10-15 ನೆನೆಯಲು ಬಿಡಿ.
  • ಅದರ ನಂತರ, ದೋಸೆ ಪ್ಯಾನ್ ತೆಗೆದುಕೊಳ್ಳಿ, ಹಿಟ್ಟು ಸ್ವಲ್ಪ ಗಟ್ಟಿಯಿದ್ದರೆ - ಅದನ್ನು ಸರಿಹೊಂದಿಸಲು ನೀವು ಸ್ವಲ್ಪ ನೀರನ್ನು ಸೇರಿಸಬಹುದು. 
  • ಹಿಟ್ಟನ್ನು ಮಧ್ಯಕ್ಕೆ ಸುರಿಯಿರಿ ಮತ್ತು ತಕ್ಷಣ ಅದನ್ನು ಹರಡಿ.
  • ಅದಕ್ಕೆ 1 ಚಮಚ ಎಣ್ಣೆ ಹಾಕಿ ನಿಧಾನವಾಗಿ ಬೇಯಿಸಿ.
  • ದೋಸೆಯನ್ನು ತಿರುಗಿಸಿ, ಎರಡೂ ಬದಿಗಳಲ್ಲಿ ಬೇಯಿಸಿ. ಇದನ್ನು ಪುದೀನಾ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ನಿಮಗೂ ಇಷ್ಟವಾಗಬಹುದು