Humrahi

ನವಣೆ ಮಶ್ರೂಮ್ ಸಲಾಡ್

ಬೇಕಾಗುವ ಪದಾರ್ಥಗಳು:

  • ಬೇಯಿಸಿದ ನವಣೆ-30gm
  • ಮಶ್ರೂಮ್-100gm
  • ಬೇಯಿಸಿದ ಬ್ರೊಕೊಲಿ-20gm
  • ಕ್ಯಾರೆಟ್-10g
  • ಈರುಳ್ಳಿ-10g
  • ಟೊಮ್ಯಾಟೋ-10gm
  • ಕ್ಯಾಪ್ಸಿಕಮ್-10gm
  • ಸವತೆಕಾಯಿ-10gm
  • ಆಲಿವ್ ಎಣ್ಣೆ-5gm
  • ನಿಂಬೆ ರಸ-2 ಟೀ ಚಮಚ
  • ಪುದೀನಾ ಎಲೆಗಳು-1 ಟೀ ಚಮಚ
  • ಚಿಲ್ಲಿ ಫ್ಲೆಕ್ಸ್- ½ ಟೀ ಚಮಚ
  • ಓರೆಗಾನೊ-½ ಟೀ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 222.55 kcal
ಪ್ರೊಟೀನ್: 10.1 gm

ಮಾಡುವ ವಿಧಾನ:

  • ಡ್ರೆಸ್ಸಿಂಗ್‌ಗಾಗಿ, ಒಂದು ಬೌಲ್‌ನಲ್ಲಿ ಮೊಸರು, ಆಲಿವ್ ಎಣ್ಣೆ, ನಿಂಬೆ ರಸ, ಉಪ್ಪು, ಚಿಲ್ಲಿ ಫ್ಲೇಕ್ಸ್ ಮತ್ತು ಓರೆಗಾನೊ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದನ್ನು ಪಕ್ಕಕ್ಕೆ ಇರಿಸಿ.
  • ಒಂದು ಪ್ಯಾನ್ ತೆಗೆದುಕೊಂಡು, 1 ಚಮಚ ಎಣ್ಣೆಯನ್ನು ಸೇರಿಸಿ, ಅದಕ್ಕೆ ಬೆಳ್ಳುಳ್ಳಿ ಮತ್ತು ಮಶ್ರೂಮ್ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ 4-5 ನಿಮಿಷಗಳ ಕಾಲ ಹುರಿಯಿರಿ. ಅದನ್ನು ಪಕ್ಕಕ್ಕೆ ಇರಿಸಿ. 
  • ದೊಡ್ಡ ಬಟ್ಟಲಿನಲ್ಲಿ ಬೇಯಿಸಿದ ನವಣೆ, ಮಶ್ರೂಮ್ ಮತ್ತು ಕತ್ತರಿಸಿದ ಎಲ್ಲಾ ತರಕಾರಿಗಳು ಮತ್ತು ಪುದೀನ ಎಲೆಗಳನ್ನು ಸೇರಿಸಿ.
  • ಈಗ ನವಣೆಯನ್ನಿಟ್ಟ ಬೌಲ್‌ಗೆ ಆಗಲೇ ತಯಾರಿಸಿದ ಡ್ರೆಸ್ಸಿಂಗ್ ಅನ್ನು ಸೇರಿಸಿ ಮತ್ತು ಸಲಾಡ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ.
  • ಸರ್ವಿಂಗ್ ಬೌಲ್‌ಗೆ ಹಾಕಿ ಮತ್ತು ತಕ್ಷಣ ಸವಿಯಿರಿ.

ನಿಮಗೂ ಇಷ್ಟವಾಗಬಹುದು