Humrahi

ಓಟ್ಸ್ ಮೂಂಗ್ ದಾಲ್ (ಹೆಸರು ಬೇಳೆ) ಚಿಲ್ಲಾ

Oats Moong Dal Chilla

ಬೇಕಾಗುವ ಪದಾರ್ಥಗಳು:

  • ಹೆಸರು ಬೇಳೆ- 1 ಬೌಲ್ (ಹಳದಿ)
  • ಉದ್ದಿನ ಬೇಳೆ- ¼ ಬೌಲ್
  • ಓಟ್ಸ್- ¼ ಬೌಲ್
  • ಹಸಿರು ಮೆಣಸಿನಕಾಯಿ -1
  • ಶುಂಠಿ ಸಣ್ಣ ತುಂಡು
  • ಕ್ಯಾಬೆಜ್- ½ ಬೌಲ್
  • ಕ್ಯಾರೆಟ್- ½ ಕಟೋರಿ
  • ಅರಿಸಿನ ಪುಡಿ- ¼  ಟೀ ಚಮಚ
  • ಮೆಣಸಿನ ಪುಡಿ - ¼ ಟೀ ಚಮಚ
  • ಕೊತ್ತಂಬರಿ ಸೊಪ್ಪು- 2 ಟೀಚಮಚ ಚೆನ್ನಾಗಿ ಕತ್ತರಿಸಿದ್ದು
  • ಎಣ್ಣೆ- ಬೇಯಿಸಲು ¼ ಕಪ್
  • ನೀರು- ¼ ರಿಂದ ½ ಕಪ್ ಬೇಳೆಗಳನ್ನು ರುಬ್ಬಲು
  • ರುಚ್ಚಿಗೆ ತಕ್ಕಂತೆ ಉಪ್ಪು

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 162 kcal
ಪ್ರೊಟೀನ್: 7.4 g

ಮಾಡುವ ವಿಧಾನ:

  • ಹೆಸರು ಬೇಳೆ ಮತ್ತು ಉದ್ದಿನಬೇಳೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
  • ಮಿಕ್ಸರ್‌ನಲ್ಲಿ ನೆನೆಸಿದ ಬೇಳೆ, ಹಸಿಮೆಣಸಿನಕಾಯಿ, ಶುಂಠಿ ಮತ್ತು ಓಟ್ಸ್ ಸೇರಿಸಿ. ಅರ್ಧದಷ್ಟು ದ್ರವರೂಪದಲ್ಲಿರುವಂತೆ ಪೇಸ್ಟ್ ಮಾಡಲು ಅಗತ್ಯವಿರುವಷ್ಟು ನೀರನ್ನು ಸೇರಿಸಿ ಅವುಗಳನ್ನು ರುಬ್ಬಿಕೊಳ್ಳಿ.
  • ಪೇಸ್ಟ್ ಅನ್ನು ಒಂದು ಬೌಲ್‌ಗೆ ಹಾಕಿ, ಉಪ್ಪು, ಅರಿಶಿನ ಪುಡಿ ಮತ್ತು ಮೆಣಸಿನ ಪುಡಿ ಸೇರಿಸಿ. ಪಕ್ಕಕ್ಕೆ ಇರಿಸಿ.
  • ಒಂದು ಪಾತ್ರೆಯಲ್ಲಿ ತುರಿದ ಕ್ಯಾಬೆಜ್, ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಉಪ್ಪು ಸೇರಿಸಿ ಮತ್ತು ಮಿಶ್ರಣ ಮಾಡಿ
  • ನಾನ್-ಸ್ಟಿಕ್ ತವಾದ ಮೇಲೆ ದೋಸೆಯಂತೆಯೇ ಮೂಂಗ್ ದಾಲ್ ಪೇಸ್ಟ್ ಅನ್ನು ಹರಡಿ. ಅದರ ಮೇಲೆ ಕ್ಯಾಬೇಜ್ ಮಿಶ್ರಣವನ್ನು ಹಾಕಿ.
  • ಈ ಪ್ಯಾನ್‌ಕೇಕ್‌ಗಳಿಗೆ ಬೇಕಾದಷ್ಟು ಎಣ್ಣೆ ಹಾಕಿ ಎರಡೂ ಬದಿ ಕಾಯಿಸಿ.
  • ರುಚಿಕರವಾದ ಮೂಂಗ್ ದಾಲ್ ಓಟ್ಸ್ ಚಿಲ್ಲಾ ಧನಿಯಾ-ಪುದಿನ ಚಟ್ನಿಯೊಂದಿಗೆ ಸವಿಯಲು ಸಿದ್ಧವಾಗಿದೆ.

ನಿಮಗೂ ಇಷ್ಟವಾಗಬಹುದು