Humrahi

ಬಹುಧಾನ್ಯಗಳ ತಾಳಿಪಿಟ್ಟು

ಬೇಕಾಗುವ ಪದಾರ್ಥಗಳು:

1 ಕಪ್ ಜೋಳದ ಹಿಟ್ಟು – 100 gm
ಕಡಲೆ ಹಿಟ್ಟು – 25gm
ಗೋಧಿ ಹಿಟ್ಟು- 25 gm
ಸಜ್ಜೆ ಹಿಟ್ಟು – 25gm
ಅಕ್ಕಿ ಹಿಟ್ಟು -25g
1 ಟೀ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಚೆನ್ನಾಗಿ ಕತ್ತರಿಸಿದ ಹಸಿಮೆಣಸು
¼ ಟೀಚಮಚ ಅರಿಸಿನ ಪುಡಿ
½ ಟೀಚಮಚ ಧನಿಯಾ ಪುಡಿ
½ ಟೀಚಮಚ ಜೀರಿಗೆ ಪುಡಿ
¼ ಟೀಚಮಚ ಅಜ್ವೈನ್
2 ಟೀಚಮಚ ಚೆನ್ನಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
1 ಕಪ್ ಕತ್ತರಿಸಿದ ಈರುಳ್ಳಿ
½ ಟೀಚಮಚ ಉಪ್ಪು
1 ಟೀ ಟಮಚ ಎಣ್ಣೆ– 5g
ಅಗತ್ಯವಿರುವಷ್ಟು ನೀರು

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 732.9 kcal
ಪ್ರೊಟೀನ್: 31.81 gm

ಮಾಡುವ ವಿಧಾನ:

  • ದೊಡ್ಡ ಬಟ್ಟಲನ್ನು ತೆಗೆದುಕೊಂಡು ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ
  • ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಮತ್ತು ಮೃದುವಾದ ಹಿಟ್ಟನ್ನು ತಯಾರಿಸಿ.
  • ಬಟರ್ ಪೇಪರ್ ಮೇಲೆ ½ ಟೀಚಮಚ ಎಣ್ಣೆಯನ್ನು ಹಚ್ಚಿ
  • ಚೆಂಡಿನ ಗಾತ್ರದಷ್ಟು ಹಿಟ್ಟನ್ನು ತೆಗೆದುಕೊಳ್ಳಿ, ಬಟರ್ ಪೇಪರ್ ಮೇಲೆ ನಿಧಾನವಾಗಿ ಪ್ಯಾಟ್ ಮಾಡಿ.
  • ಬೆರಳಿನಿಂದ ತೆಳುವಾದ ತಾಳಿಪಿಟ್ಟಿನ ಮೇಲೆ ರಂಧ್ರಗಳನ್ನು ಮಾಡಿ.
  • ಬಿಸಿಯಾದ ತವಾದ ಮೇಲೆ ನಿಧಾನವಾಗಿ ಇದನ್ನು ಹಾಕಿ, ಅಗತ್ಯವಿರುವಷ್ಟು ಎಣ್ಣೆಯನ್ನು ಅದಕ್ಕೆ ಹಾಕಿ
  • ಮುಚ್ಚಿ ಮತ್ತು ಬೇಯಿಸಿ, ತಿರುಗಿಸಿ, ಮತ್ತೆ ಮುಚ್ಚಿ ಮತ್ತು 2 ನಿಮಿಷ ಬೇಯಿಸಿ.
  • ಎರಡೂ ಕಡೆ ಚೆನ್ನಾಗಿ ಬೇಯಿಸಿ.

ನಿಮಗೂ ಇಷ್ಟವಾಗಬಹುದು