Humrahi

ಬೆಳ್ಳುಳ್ಳಿ ಮತ್ತು ಸಬ್ಬಸ್ಸಿಗೆ ಜೊತೆಗೆ ಪುದಿನ ಡಿಪ್

ಬೇಕಾಗುವ ಪದಾರ್ಥಗಳು:

ಮೊಸರು – 1 ಕಪ್
ಪುದಿನ – 1 ಕಪ್
ಸಬ್ಬಸ್ಸಿಗೆ- ತಾಜಾ ಸಬ್ಬಸ್ಸಿಗೆ ಸೊಪ್ಪು ಅಲಂಕಾರಕ್ಕಾಗಿ
ಒಣಗಿದ ಸಬ್ಬಸ್ಸಿಗೆ ಸೊಪ್ಪು
3-4 ಎಸಳು ಬೆಳ್ಳುಳ್ಳಿ
ಉಪ್ಪು – ರುಚಿಗೆ
ಜೀರಿಗೆ ಹುಡಿ – ಚಿಟಿಕೆ
ಹಸಿಮೆಣಸು– 2 ಸಣ್ಣದು
1 ಟೇಬಲ್‌ಸ್ಪೂನ್ ವರ್ಜಿನ್ ಆಲಿವ್ ಎಣ್ಣೆ

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 120 ಕಿಲೋಕ್ಯಾಲರಿ
ಪ್ರೊಟೀನ್: 2.9 ಗ್ರಾಂ

ಮಾಡುವ ವಿಧಾನ:

  • ಪುದಿನ ಎಲೆಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಸ್ವಲ್ಪ ಹೊತ್ತು ತಣ್ಣೀರಿನಲ್ಲಿ ಇಡಿ.
  • ಫುಡ್‌ಪ್ರಾಸೆಸರ್ ಬಳಸಿಕೊಂಡು, ಪುದಿನ ಎಲೆಗಳು, ಜೀರಿಗೆ ಹುಡಿ ಮತ್ತು ಒಣಗಿದ ಸಬ್ಬಸ್ಸಿಗೆಸೊಪ್ಪು ಬೆಳ್ಳುಳ್ಳಿ, ಉಪ್ಪು ಮತ್ತು ಹಸಿಮೆಣಸನ್ನು ಹಾಕಿ ಮಿಕ್ಸ್ ಮಾಡಿ.
  • ಒಂದು ಬೌಲ್‌ನಲ್ಲಿ ಗಟ್ಟಿ ಮೊಸರು ಮತ್ತು ಪುದಿನ, ಸಬ್ಬಸ್ಸಿಗೆ ಪ್ಯೂರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಇನ್ನು ಮುಚ್ಚಿ 30 ನಿಮಿಷಗಳ ಕಾಲ ಫ್ರಿಜ್‌ನಲ್ಲಿಡಿ. ತಾಜಾ ಸಬ್ಬಸ್ಸಿಗೆಯಲ್ಲಿ ಅಲಂಕರಿಸಿ ತಣ್ಣಗೆ ಸರ್ವ್ ಮಾಡಿ.

ನಿಮಗೂ ಇಷ್ಟವಾಗಬಹುದು