Humrahi

ಮಿಲೆಟ್ ಮೊಸರನ್ನ

ಬೇಕಾಗುವ ಪದಾರ್ಥಗಳು:

  • ನವಣೆ-50 gm
  • ಮೊಸರು-100 gm
  • ಸೌತೆಕಾಯಿ- 20gm
  • ಕ್ಯಾರೆಟ್ – 20gm
  • ಈರುಳ್ಳಿ-20gm
  • ಕೊತ್ತಂಬರಿ ಸೊಪ್ಪು- 1 tbsp
  • ಕರಿಬೇವಿನ ಎಲೆಗಳು- 5  
  • ಸಾಸಿವೆ -½ tsp
  • ಮೆಣಸು-1
  • ಎಣ್ಣೆ-5gm
  • ಉಪ್ಪು- ರುಚಿಗೆ ತಕ್ಕಷ್ಟು

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 219 kcal
ಪ್ರೊಟೀನ್: 10 g

ಮಾಡುವ ವಿಧಾನ:

  • ನವಣೆಯನ್ನು ತೊಳೆದು 3-4 ಗಂಟೆಗಳ ಕಾಲ ನೆನೆಸಿ.
  • ಒಂದು ಕುಕ್ಕರ್‌ಗೆ ನನೆಸಿದ ನವಣೆ ಮತ್ತು 200ml ನೀರು ಸೇರಿಸಿ ಮಧ್ಯಮ ಉರಿಯಲ್ಲಿ 3 ಸೀಟಿ ಕೂಗಿಸಿ.
  • ನವಣೆ ಬೆಂದ ನಂತರ ಮೊಸರು ಸೇರಿಸಲು ಮುನ್ನ ಇದನ್ನು ತಣಿಯಲು ಬಿಡಿ.
  • ಈಗ ಮೊಸರು, ಹೆಚ್ಚಿದ ತರಕಾರಿಗಳು, ಉಪ್ಪು ಮತ್ತು ಬೇಯಿಸಿದ ನವಣೆ ಸೇರಿಸಿ ಮಿಶ್ರಣ ಮಾಡಿ
  • ಒಂದು ಪ್ಯಾನ್‌ನಲ್ಲಿ ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಈ ಒಗ್ಗರಣೆಯನ್ನು ಮಿಲೆಟ್ ಮೊಸರು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿ.
  • ಮಿಲೆಟ್ ಮೊಸರನ್ನ ಈಗ ಸವಿಯಲು ಸಿದ್ದ.

ನಿಮಗೂ ಇಷ್ಟವಾಗಬಹುದು