Humrahi

ಆರೋಗ್ಯಕರ ಗೋಧಿ ನುಚ್ಚು ಮತ್ತು ಹೆಸರುಕಾಳಿನ ಖಿಚಡಿ

ಬೇಕಾಗುವ ಪದಾರ್ಥಗಳು:

ಗೋಧಿ ನುಚ್ಚು: 30 ಗ್ರಾಂ
ಹೆಸರು ಕಾಳು: 15 ಗ್ರಾಂ
ಹೆಸರು ಬೇಳೆ: 15 ಗ್ರಾಂ
ಟೊಮೆಟೋ: 20 ಗ್ರಾಂ
ಈರುಳ್ಳಿ: 20 ಗ್ರಾಂ
ಅವರೆ ಕಾಳು: 10 ಗ್ರಾಂ
ಎಣ್ಣೆ- 1/2 tsp
ಉಪ್ಪು- ರುಚಿಗೆ ತಕ್ಕಷ್ಟು
ಒಂದು ಚಿಟಿಕೆ ಅರಿಶಿನ
ಒಂದು ಚಿಟಿಕೆ ಜೀರಿಗೆ

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 240 ಕಿಲೋಕ್ಯಾಲರಿ
ಪ್ರೊಟೀನ್: 11.2 ಗ್ರಾಂ

ಮಾಡುವ ವಿಧಾನ:

  • ಎಲ್ಲಾ ಬೇಳೆ ಕಾಳು ಮತ್ತು ಗೋಧಿ ನುಚ್ಚನ್ನು 1 ಕಪ್ ನೀರಿನಲ್ಲಿ 10-15 ನಿಮಿಷಗಳ ಕಾಲ ನೆನೆಸಿ ನಂತರ ನೀರನ್ನು ಚೆಲ್ಲಿ.
  • ಒಂದು ಪ್ರೆಶರ್ ಕುಕ್ಕರ್‌ನಲ್ಲಿ, ಎಣ್ಣೆಯನ್ನು ಹಾಕಿ ಮತ್ತು ಅದಕ್ಕೆ ಜೀರಿಗೆಯನ್ನು ಸೇರಿಸಿ ಹಾಗೂ ಜೀರಿಗೆಯನ್ನು ಚೆನ್ನಾಗಿ ಹುರಿಯಿರಿ
  • ತರಕಾರಿಗಳು ಮತ್ತು ಮಸಾಲೆಗಳನ್ನು ಸೇರಿಸಿ. ನಂತರ ತೊಳೆದ ಬೇಳೆಕಾಳು ಮತ್ತು ಗೋಧಿ ನುಚ್ಚನ್ನು ಅದಕ್ಕೆ ಸೇರಿಸಿ.
  • ಮಿಶ್ರಣಕ್ಕೆ 3 ಕಪ್ ನೀರು ಸೇರಿಸಿ ಮತ್ತು 3 ಸೀಟಿಗಳವರೆಗೆ ಅಥವಾ ಗೋಧಿ ನುಚ್ಚು ಸಂಪೂರ್ಣವಾಗಿ ಬೇಯಿಸುವವರೆಗೆ ಇಡಿ.
  • ಹಬೆಯು ಸಂಪೂರ್ಣವಾಗಿ ಹೋದ ನಂತರ, ಕುಕ್ಕರ್ ಅನ್ನು ತೆರೆಯಿರಿ ಮತ್ತು 1 ಬೌಲ್ ಮೊಸರು / 1 ಗ್ಲಾಸ್ ಮಜ್ಜಿಗೆಯನ್ನು ಖಿಚಡಿಗೆ ಸೇರಿಸಿ ನಂತರ ಇದು ಸವಿಯಲು ಸಿದ್ಧ

ನಿಮಗೂ ಇಷ್ಟವಾಗಬಹುದು