ಬೇಸನ್ ತರಕಾರಿ ಚಿಲ್ಲಾ
ಬೇಕಾಗುವ ಪದಾರ್ಥಗಳು:
ಕಡಲೆಹಿಟ್ಟು – 100 gm
ಕತ್ತರಿಸಿದ ಈರುಳ್ಳಿ – 30 gm
ಕತ್ತರಿಸಿದ ಟೊಮೆಟೋ – 30 gm
ಹಸಿಮೆಣಸು- 1
ಸಣ್ಣ ತುಂಡು ಒಣಶುಂಠಿ
ಕ್ಯಾಬೇಜ್- 25 gm
ಕ್ಯಾರೆಟ್- 25 gm
ಅರಿಶಿನ ಹುಡಿ- 1⁄4 tsp
ಮೆಣಸಿನ ಹುಡಿ- 1⁄4 tsp
ಹೆಚ್ಚಿದ ಕೊತ್ತಂಬರಿ ಸೊಪ್ಪು- 30 gm
ಹುರಿಯಲು ಎಣ್ಣೆ- 25 ml ಕಪ್
ಉಪ್ಪು ರುಚಿಗೆ – 1 tsp
ಪೌಷ್ಟಿಕಾಂಶ ಮೌಲ್ಯ:
ಶಕ್ತಿ: 650 ಕಿಲೋಕ್ಯಾಲರಿ
ಪ್ರೊಟೀನ್: 24.33 ಗ್ರಾಂ
ಮಾಡುವ ವಿಧಾನ:
- 1 ದೊಡ್ಡ ಬೌಲ್‌ನಲ್ಲಿ1 ಕಪ್ ಬೇಸನ್ ಅನ್ನು ತೆಗೆದುಕೊಳ್ಳಿ.
- ಇದಕ್ಕೆ ಹೆಚ್ಚಿದ ತರಕಾರಿಗಳಾದ ಈರುಳ್ಳಿ, ಟೊಮೆಟೋ, ಕ್ಯಾರೆಟ್, ಕ್ಯಾಬೇಜ್, ಹಸಿಮೆಣಸು ಸೇರಿಸಿ
- ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ
- ಇದಕ್ಕೆ ತುರಿದ ಶುಂಠಿ, ಅರಿಶಿನ, ಮೆಣಸಿನ ಹುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ
- ಇದಕ್ಕೆ ನೀರು ಸೇರಿಸಿ ದಪ್ಪನೆಯ ಹಿಟ್ಟು ತಯಾರಿಸಿ.
- ಇದನ್ನು ನಾನ್-ಸ್ಟಿಕ್ ತವಾದ ಮೇಲೆ ದೋಸೆಯಂತೆ ಹರಡಿ.
- ಈ ಪ್ಯಾನ್‌ಕೇಕ್‌ಗಳಿಗೆ ಬೇಕಾದಷ್ಟು ಎಣ್ಣೆ ಹಾಕಿ ಎರಡೂ ಬದಿ ಕಾಯಿಸಿ.