Humrahi

ಬೇಸನ್ (ಕಡಲೆಹಿಟ್ಟು) ಓಟ್ಸ್ ಚೀಲಾ

ಬೇಕಾಗುವ ಪದಾರ್ಥಗಳು:

ಕಡಲೆಹಿಟ್ಟು : 20 ಗ್ರಾಂ
ಓಟ್ಸ್ ಹಿಟ್ಟು: 20 ಗ್ರಾಂ
ಈರುಳ್ಳಿ: 10 ಗ್ರಾಂ
ಟೊಮೆಟೋ: 10 ಗ್ರಾಂ
ಕೊತ್ತಂಬರಿ ಸೊಪ್ಪು- 5-6 ಎಲೆಗಳು
ಹಸಿಮೆಣಸು- ½
ಅರಿಶಿನ ಹುಡಿ- ಚಿಟಿಕೆ
ಉಪ್ಪು- ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನ ಹುಡಿ- ಚಿಟಿಕೆ
ಜೀರಿಗೆ ಪುಡಿ- ಚಿಟಿಕೆ 
ಎಣ್ಣೆ- 1tsp

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 210 ಕಿಲೋಕ್ಯಾಲರಿ
ಪ್ರೊಟೀನ್: 8.2 ಗ್ರಾಂ

ಮಾಡುವ ವಿಧಾನ:

  • ಎಣ್ಣೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ನೀರು ಹಾಕಿ ಗಂಟಿಲ್ಲದಂತೆ ತೆಳುವಾದ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ
  • ತವಾ/ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ ಇದಕ್ಕೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ.
  • ಹಿಟ್ಟನ್ನು ಹಗುರವಾಗಿ ದೋಸೆಯ ಆಕಾರಕ್ಕೆ ಹರಡಿ.
  • ಉತ್ತಪ್ಪದ ಮೇಲ್ಭಾಗವು ಬೇಯುವ ತನಕ ಕಡಿಮೆ- ಮಧ್ಯಮ ಉರಿಯಲ್ಲಿಟ್ಟು ಬೇಯಿಸಿ.
  • ದೋಸೆಯು ಕಂದು ಬಣ್ಣ ಬರುವ ತನಕ ಬೇಯಿಸಿ. ನಂತರ ಮಗುಚಿ. ಎರಡೂ ಬದಿಗಳು ಕಂದು ಬಣ್ಣಕ್ಕೆ ತಿರುಗುವ ತನಕ ಬೇಯಿಸಿ.
  • 2tsbp ಮೊಸರು ಅಥವಾ ಪುದಿನ ಚಟ್ನಿಯೊಂದಿಗೆ ರುಚಿಕರವಾದ ಓಟ್ಸ್ ಚೀಲಾವನ್ನು ಸರ್ವ್ ಮಾಡಿ.

ನಿಮಗೂ ಇಷ್ಟವಾಗಬಹುದು