ಚಿಕನ್ ಮತ್ತು ಓಟ್ಸ್ ಗಲೋಟಿ ಕಬಾಬ್
ಬೇಕಾಗುವ ಪದಾರ್ಥಗಳು:
- ಚಿಕ್ಕದಾಗಿ ಹೆಚ್ಚಿದ ಚಿಕನ್ - 400 ಗ್ರಾಂ
- ಓಟ್ಸ್ -3 ಟೇಬಲ್ ಚಮಚ
- ರವೆ - 2 ಟೇಬಲ್ ಚಮಚ
- ಕರಿಮೆಣಸಿನ ಪುಡಿ - 1/2 ಟೀ ಚಮಚ
- ಜೀರಿಗೆ - 1 ಟೀ ಚಮಚ
- ಪುಡಿ ಮಾಡಿದ ಕೆಂಪು ಮೆಣಸು - 2 ಟೀ ಚಮಚ
- ಉಪ್ಪು ರುಚಿಗೆ ತಕ್ಕಷ್ಟು
- ಕತ್ತರಿಸಿದ ಬೆಲ್ ಪೆಪ್ಪರ್ – 1 ಪೂರ್ತಿ
- ಈರುಳ್ಳಿ ಕತ್ತರಿಸಿದ್ದು – 1 ದೊಡ್ಡದು
- ಕ್ಯಾರೆಟ್ ಕತ್ತರಿಸಿದ್ದು – 1 ಮಧ್ಯಮ ಗಾತ್ರ
- ಟೊಮಾಟೊ ಕತ್ತರಿಸಿದ್ದು – 1 ಪೂರ್ತಿ
- ಬೆಳ್ಳುಳ್ಳಿ ಎಸಳುಗಳು - 3
- ಶುಂಠಿ– 1 ಚಿಕ್ಕ ತುಂಡು
- ಮೊಟ್ಟೆ – 1 ಪೂರ್ತಿ
- ಎಣ್ಣೆ – 15ಮಿ.ಲಿ.
ಪೌಷ್ಟಿಕಾಂಶ ಮೌಲ್ಯ:
ಕ್ಯಾಲರಿಗಳು – 1000 ಕ್ಯಾಲರಿ
ಪ್ರೊಟೀನ್ – 45ಗ್ರಾಂ
ಮಾಡುವ ವಿಧಾನ:
- ಮೊದಲಿಗೆ ಕ್ಯಾರೆಟ್, ಬೆಲ್ ಪೆಪ್ಪರ್, ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಚಾಪರ್‌ನಲ್ಲಿ ಸೇರಿಸಿ ಒಟ್ಟಾರೆಯಾಗಿ ಹೆಚ್ಚಿಕೊಳ್ಳಿ.
- ಟೊಮಾಟೊ ಮತ್ತು ಈರುಳ್ಳಿಯನ್ನು ಒಟ್ಟಾರೆಯಾಗಿ ಮತ್ತು ಪ್ರತ್ಯೇಕವಾಗಿ ಹೆಚ್ಚಿರಿ.
- ಒಂದು ಬಟ್ಟಲಿನಲ್ಲಿ, ಚಿಕ್ಕದಾಗಿ ಹೆಚ್ಚಿದ ಚಿಕನ್, ಓಟ್ಸ್, ಹೆಚ್ಚಿದ ತರಕಾರಿಗಳು ಮತ್ತು ಟೊಮಾಟೊ ಮತ್ತು ಈರುಳ್ಳಿಗಳನ್ನು ಸೇರಿಸಿ.
- ಎಲ್ಲ ಮಾಸಲೆಗಳನ್ನು, ಹೊಡೆದ ಮೊಟ್ಟೆ ಮತ್ತು ರವೆಯನ್ನು ಸೇರಿಸಿ.
- ಎಲ್ಲ ಸಾಮಗ್ರಿಗಳನ್ನು ಮಿಶ್ರ ಮಾಡಿ ಮುಚ್ಚಿಡಿ. 5 ರಿಂದ 10 ನಿಮಿಷಗಳ ಕಾಲ ಅದನ್ನು ಹಾಗೆ ಬಿಡಿ.
- ಒಂದು ಟ್ರೇಯ ಮೇಲೆ ಬೆಣ್ಣೆ ಕಾಗದ ಅಥವಾ ಮೇಣದ ಹಾಳೆಯನ್ನು ಬಿಡಿಸಿ ಮತ್ತು ಅದನ್ನು ಎಣ್ಣೆಯಿಂದ ಸವರಿ.
- ಈ ಮಿಶ್ರಣವನ್ನು ಮೇಣದ ಹಾಳೆಯ ಮೇಲೆ 2 ಇಂಚುಗಳಷ್ಟು ದೂರದಲ್ಲಿ ಒಂದೊಂದು ಚಮಚದಷ್ಟು ಗುಡ್ಡೆಯಂತೆ ಹಾಕಿ.
- ಚಮಚದ ಹಿಂಭಾಗಕ್ಕೆ ಅಥವಾ ನಿಮ್ಮ ಬೆರಳಿಗೆ ಎಣ್ಣೆ ಸವರಿ ಮಿಶ್ರಣವನ್ನು ಚಪ್ಪಟೆ ಮಾಡಿ ಕಬಾಬ್‌ಗಳನ್ನು ಮಾಡಿ.
- ಅರ್ಧ ಗಂಟೆಯ ಕಾಲ ಅಥವಾ ಅವು ಗಟ್ಟಿಯಾಗುವ ತನಕ ಅವುಗಳನ್ನು ಫ್ರೀಝ್ ಮಾಡಿ. ಈ ಕಬಾಬ್‌ಗಳನ್ನು ಅವುಗಳ ಅಂಚು ಕಂದು ಬಣ್ಣಕ್ಕೆ ತಿರುಗುವ ತನಕ ನಾನ್-ಸ್ಟಿಕ್ ಫ್ರೈ ಪ್ಯಾನ್‌ನಲ್ಲಿ ಮಧ್ಯಮ ಉರಿಯಲ್ಲಿ ಸ್ವಲ್ಪ ಹುರಿದುಕೊಳ್ಳಿ ಅಥವಾ ಓವನ್‌ನಲ್ಲಿ 1800 ಸೆಂಟಿಗ್ರೇಡ್‌ನಲ್ಲಿ 15 ನಿಮಿಷಗಳಷ್ಟು ಕಾಲ ಅಥವಾ ಕಂದು ಬಣ್ಣ ಬರುವವರೆಗೆ ಬೇಯಿಸಿ.
- ನಿಮ್ಮ ಆಯ್ಕೆಯ ಯಾವುದಾದರೂ ಡಿಪ್‌ನೊಂದಿಗೆ ಬಡಿಸಿ.