Humrahi

ಕಾಬುಲಿ ಚನ್ನಾ ಕ್ವೆಸಾಡಿಲ್ಲಾ

ಬೇಕಾಗುವ ಪದಾರ್ಥಗಳು:

  • ಬೇಯಿಸಿದ ಕಾಬುಲಿ ಚನ್ನಾ- 30g
  • 1 ಮೊಟ್ಟೆ [ಆಮ್ಲೆಟ್] -20g
  • ಚೀಸ್ ತುಂಡು-15g
  • 1 ಗೋಧಿ ಟಾರ್ಟಿಲ್ಲಾ/ಚಪಾತಿ-20g
  • ಈರುಳ್ಳಿ-20g
  • ಕ್ಯಾಪ್ಸಿಕಂ-20
  • ಕ್ಯಾರೆಟ್-20g
  • ಕೊತ್ತಂಬರಿ ಸೊಪ್ಪು-5g
  • ಹಸಿಮೆಣಸು 1
  • ಬೆಳ್ಳುಳ್ಳಿ- 2 ಎಸಳು
  • ಚಿಲ್ಲಿ ಫ್ಲೇಕ್ಸ್-1 tsp
  • ಆರಿಗ್ಯಾನೋ-1 tsp
  • ಅರಿಶಿನ ಹುಡಿ-1 tsp
  • ರುಚಿಗೆ ತಕ್ಕಷ್ಟು ಉಪ್ಪು
  • ಎಣ್ಣೆ-5g
  •  

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 296.32 kcal
ಪ್ರೊಟೀನ್: 14.46 g

ಮಾಡುವ ವಿಧಾನ:

  • ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಹಸಿಮೆಣಸು ಮತ್ತು ಈರುಳ್ಳಿ ಸೇರಿಸಿ, ಚೆನ್ನಾಗಿ ಬೇಯಿಸಿ.
  • ಈಗ ಎಲ್ಲಾ ತರಕಾರಿಗಳನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ.
  • ಇದಕ್ಕೆ ಬೇಯಿಸಿ ಮ್ಯಾಶ್ ಮಾಡಿದ ಚೆನ್ನಾ ಕಡಲೆಯನ್ನು ಸೇರಿಸಿ ಎಲ್ಲಾ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 1-2 ನಿಮಿಷಗಳ ಕಾಲ ಬೇಯಲು ಬಿಡಿ.
  • ಒಂದು ಚಪಾತಿ /ಟಾರ್ಟಿಲ್ಲ ತೆಗೆದುಕೊಂಡು ಅದರ ಮೇಲೆ ಮೊಟ್ಟೆಯನ್ನು ಪದರದಂತೆ ಹಚ್ಚಿ, ನಂತರ ಕಾಬುಲ್ ಕಡಲೆ ಫಿಲ್ಲಿಂಗ್ ಸೇರಿಸಿ ಅದರ ಮೇಲೆ ಚೀಸ್ ಅನ್ನು ತುರಿದು ಹಾಕಿ.  
  • ಈಗ ಟಾರ್ಟಿಲ್ಲ ಅನ್ನು ಮಡಚಿ ಎರಡೂ ಬದಿಯಲ್ಲಿ ಗರಿಗರಿಯಾಗಿ ಟೋಸ್ಟ್ ಮಾಡಿ, ಬಿಸಿ ಬಿಸಿಯಾಗಿ ಸವಿಯಿರಿ.

You might also like