ಚಿಲ್ಲಿ ಟೋಫು
ಬೇಕಾಗುವ ಪದಾರ್ಥಗಳು:
- 100g ಟೋಫು
- 1 ಹೆಚ್ಚಿದ ಕ್ಯಾಪ್ಸಿಕಂ
- ಜಜ್ಜಿದ 1 ಸಣ್ಣ ಶುಂಠಿ
- 2 ಎಸಳು ಬಳ್ಳುಳ್ಳಿ
- 1 ಸಣ್ಣ-ಗಾತ್ರದ ಹೆಚ್ಚಿದ ಈರುಳ್ಳಿ
- 1 ಮಧ್ಯಮ ಗಾತ್ರದ ಹೆಚ್ಚಿದ ಟೊಮೆಟೋ
- ¼ tsp ಕೆಂಪು ಮೆಣಸಿನ ಹುಡಿ
- ಉಪ್ಪು ಮತ್ತು ಕರಿಮೆಣಸಿನ ಹುಡಿ ರುಚಿಗೆ
- ¼ tsp ಅರಿಶಿನ ಹುಡಿ
- 1 ಟೀ ಚಮಚ ಎಣ್ಣೆ
ಪೌಷ್ಟಿಕಾಂಶ ಮೌಲ್ಯ:
ಶಕ್ತಿ: 110 ಕಿಲೋಕ್ಯಾಲರಿ
ಪ್ರೊಟೀನ್: 11 ಗ್ರಾಂ
ಮಾಡುವ ವಿಧಾನ:
- ನಾನ್-ಸ್ಟಿಕ್ ಪ್ಯಾನ್ ಅನ್ನು ಬಿಸಿ ಮಾಡಿ. ಇದನ್ನು ಸಣ್ಣ ಉರಿಯಲ್ಲಿ 30 sec ಬಿಸಿ ಮಾಡಿ, ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ
- ಸಾಕಷ್ಟು ಬಿಸಿಯಾದಾಗ ಇದಕ್ಕೆ ಎಣ್ಣೆ ಹಚ್ಚಿ.
- ಈಗ ಜಜ್ಜಿದ ಶುಂಠಿ, ಬೆಳ್ಳುಳ್ಳಿ ಎಸಳುಗಳು, ಹೆಚ್ಚಿದ ನೀರುಳ್ಳಿಯನ್ನು ಪ್ಯಾನ್‌ಗೆ ಹಾಕಿ ಈ ಮೂರು ಸಾಮಗ್ರಿಗಳನ್ನು ಮಿಶ್ರಣ ಮಾಡಿ.
- ಈಗ ಪ್ಯಾನ್ ಅನ್ನು ಪ್ಲೇಟ್‌ನಿಂದ ಮುಚ್ಚಿ ಸಣ್ಣ ಉರಿಯಲ್ಲಿ ಸುಮಾರು 45 ಸೆಕೆಂಡು ಕಾಲ ಬೇಯಿಸಿ.
- ಈಗ ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಕೊನೆಯದಾಗಿ ಟೊಮೆಟೋ ಸೇರಿಸಿ ಕಡೆಯದಾಗಿ ಚೆನ್ನಾಗಿ ಮಿಶ್ರಣ ಮಾಡಿ, ಪ್ಯಾನ್ ಅನ್ನು ಪ್ಲೇಟ್‌ನಿಂದ ಮುಚ್ಚಿ 1 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
- ನಂತರ ಹೆಚ್ಚಿದ ಟೋಫು ಸೇರಿಸಿ, ಇದನ್ನು ಹುಡಿ ಮಾಡಿಯೂ ಸೇರಿಸಬಹುದು.
- ಈಗ ಇದನ್ನು ಸುಮಾರು 1 ನಿಮಿಷಗಳ ಕಾಲ ಪ್ಲೇಟ್‌ನಿಂದ ಮುಚ್ಚಿ, ಕಡಿಮೆ ಉರಿಯಲ್ಲಿ ಇದನ್ನು ಬೇಯಿಸಿ.
- ಈಗ ಕಾಳು ಮೆಣಸು, ಉಪ್ಪು ಮತ್ತು ಕೆಂಪು ಮೆಣಸಿನ ಹುಡಿಯನ್ನು ಸೇರಿಸಿ.
- ಎಲ್ಲಾ ಮಸಾಲೆಗಳನ್ನು ಸೇರಿಸಿ ಮಿಶ್ರಣ ಮಾಡಿ, ಇದನ್ನು ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿ.
- ರುಚಿಯಾದ ಚಿಲ್ಲಿ ಟೋಫು ಈಗ ಸಿದ್ಧವಾಗಿದೆ. ಇದನ್ನು ಬಿಸಿ ಬಿಸಿಯಾಗಿ ಸವಿಯಿರಿ.