ಆ್ಯಪಲ್ ಮೊಸರು ಸ್ಮೂದಿ
ಬೇಕಾಗುವ ಪದಾರ್ಥಗಳು:
- ಕತ್ತರಿಸಿದ ಆ್ಯಪಲ್
- ½ ಕಪ್ ಮೊಸರು
- 1 tsp ಚಿಯಾ ಬೀಜಗಳು
ಪೌಷ್ಟಿಕಾಂಶ ಮೌಲ್ಯ:
ಶಕ್ತಿ: 125 ಕಿಲೋಕ್ಯಾಲರಿ
ಪ್ರೊಟೀನ್: 2 ಗ್ರಾಂ
ಮಾಡುವ ವಿಧಾನ:
- ½ tsp ಚಿಯಾ ಬೀಜಗಳನ್ನು¼ ಕಪ್ ನೀರಿನಲ್ಲಿ ರಾತ್ರಿ ಪೂರ್ತಿ ನೆನೆಸಿ ಇಡಿ.
- ಸಾಮಾನ್ಯ ಗಾತ್ರದ ಆ್ಯಪಲ್ ತೆಗೆದುಕೊಂಡು ಚೆನ್ನಾಗಿ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ
- ಫುಡ್ ಪ್ರಾಸೆಸರ್‌ಗೆ ಮೊಸರು, ಕತ್ತರಿಸಿದ ಆ್ಯಪಲ್ ಮತ್ತು ಐಸ್ ಅನ್ನು ಹಾಕಿ
- ಇದನ್ನು ಚೆನ್ನಾಗಿ ಬ್ಲೆಂಡ್ ಮಾಡಿ, ಒಂದು ಬೌಲ್‌ಗೆ ಹಾಕಿ ರಾತ್ರಿ ಪೂರ್ತಿ ನೆನೆಸಿದ ಚಿಯಾ ಬೀಜಗಳನ್ನು (1/2 tsp)ಸೇರಿಸಿ
- ಇದನ್ನು ತಣ್ಣಗೆ ಸವಿಯಿರಿ.