ಮಧುಮೇಹ ಆಹಾರಾಭ್ಯಾಸಗಳು ಆರೋಗ್ಯಕರ ಪೋಷಕಾಂಶಭರಿತ ಆಹಾರಗಳನ್ನು ಮಿತಿಯಲ್ಲಿ ಸೇವಿಸುವುದು ಮತ್ತು ನಿಯಮಿತ ಸಮಯದಲ್ಲಿ ಊಟಮಾಡುವುದಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಮಧುಮೇಹಕ್ಕೆ ಸಂಬಂಧಿಸಿದ ದೀರ್ಘಕಾಲಿಕ ತೊಡಕುಗಳನ್ನು ತಡೆಗಟ್ಟುವ ಗುರಿ ಹೊಂದಿದೆ.
ಮಧುಮೇಹ ಆಹಾರಾಭ್ಯಾಸದ ಪ್ರಮುಖ ಅಂಶಗಳು, ಹಣ್ಣುಗಳು, ತರಕಾರಿಗಳು, ಧಾನ್ಯಗಳನ್ನು ಹಾಗೂ ಅಧಿಕ ಸಕ್ಕರೆಯುಳ್ಳ ಆಹಾರಗಳು ಮತ್ತು ಕೊಬ್ಬುಗಳನ್ನು ಮಿತಿಗೊಳಿಸುವುದನ್ನು ಒಳಗೊಂಡಿದೆ. ದಿನಪೂರ್ತಿ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವನೆ, ಕಾರ್ಬೋಹೈಡ್ರೇಟ್ಗಳನ್ನು ಎಚ್ಚರಿಕೆಯಿಂದ ಸೇವಿಸುವುದು ಹಾಗೂ ಆಲ್ಕೋಹಾಲ್ ಮತ್ತು ಉಪ್ಪಿನ ಹಿತಮಿತವಾದ ಸೇವನೆ ಕೂಡಾ ಪ್ರಮುಖವಾದುದು.
ನಾರಿನಂಶಭರಿತ ಆಹಾರಗಳು, ಹೃದಯ ಸ್ನೇಹಿ ಮೀನು (ವಾಕ್ಕೆರಡು ಬಾರಿ) ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ “ಉತ್ತಮ” ಕೊಬ್ಬುಗಳಾದ ಬೆಣ್ಣೆಹಣ್ಣುಗಳು ಹಾಗೂ ಬೀಜಗಳನ್ನು ಆಹಾರದಲ್ಲಿ ಅಳವಡಿಸಿಕೊಳ್ಳುವುದು. ದಿ ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್, ಊಟದ ತಟ್ಟೆಯ ಅರ್ಧಭಾಗದಷ್ಟು ಪಿಷ್ಠರಹಿತ ತರಕಾರಿಗಳು, ಕಾಲು ಭಾಗದಷ್ಟು ಪ್ರೊಟೀನ್ ಮತ್ತು ಕಾಲು ಭಾಗದಷ್ಟು ಧಾನ್ಯಗಳಂತಹ ಕಾರ್ಬೋಹೈಡ್ರೇಟ್ ಅನ್ನು ಒಳಗೊಂಡಿರಬೇಕು ಎಂದು ಸೂಚಿಸುತ್ತದೆ.
ಸಣ್ಣ ಪ್ರಮಾಣದ “ಉತ್ತಮ” ಕೊಬ್ಬುಗಳು, ಹಣ್ಣುಗಳು ಮತ್ತು ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳು ಊಟವನ್ನು ಪೂರ್ತಿಗೊಳಿಸುತ್ತದೆ. ನೀರು ಅಥವಾ ಕಡಿಮೆ ಕ್ಯಾಲೋರಿ ಪಾನೀಯಗಳನ್ನು ಆಯ್ಕೆ ಮಾಡಿ. ವೈಯುಕ್ತಿಕ ಮಾರ್ಗದರ್ಶನಕ್ಕಾಗಿ ನೋಂದಾಯಿತ ಆಹಾರತಜ್ಞರೊಂದಿಗೆ ಸಮಾಲೋಚಿಸಿ. ಮಧುಮೇಹ ನಿರ್ವಹಣೆಯ ಹೊರತಾಗಿ, ಮಧುಮೇಹ ಆಹಾರಕ್ರಮವು ಹೃದ್ರೋಗಗಳು, ಕೆಲವೊಂದು ಕ್ಯಾನ್ಸರ್ಗಳು ಮತ್ತು ಭವಿಷ್ಯದಲ್ಲಿ ಮೂಳೆ ಸವೆತದ ಅಪಾಯವನ್ನು ಕಡಿಮೆಗೊಳಿಸುತ್ತದೆ.9,10,11