ಪೂರ್ಣ ಗೋಧಿಯ ಚಿಕನ್ ಡಂಪ್ಲಿಂಗ್
ಬೇಕಾಗುವ ಪದಾರ್ಥಗಳು:
- ಪೂರ್ಣ ಗೋಧಿ ಹಿಟ್ಟು – 60ಗ್ರಾಂ
- ಎಣ್ಣೆ – 10 ಮಿ.ಲಿ.
- ಸಣ್ಣಗೆ ಹೆಚ್ಚಿದ ಚಿಕನ್- 100ಗ್ರಾಂ
- ಸಣ್ಣಗೆ ಹೆಚ್ಚಿದ ಈರುಳ್ಳಿ – 50 ಗ್ರಾಂ
- ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) – 50ಗ್ರಾಂ
- ಕ್ಯಾರೆಟ್ – 50 ಗ್ರಾಂ
- ಶುಂಠಿ– 5 ಗ್ರಾಂ
- ಕೊತ್ತಂಬರಿ ಸೊಪ್ಪು – 8-10 ಎಲೆಗಳು
- ಉಪ್ಪು ರುಚಿಗೆ ತಕ್ಕಂತೆ
ಪೌಷ್ಟಿಕಾಂಶ ಮೌಲ್ಯ:
ಕ್ಯಾಲರಿಗಳು - 563 ಕ್ಯಾಲರಿ
ಪ್ರೊಟೀನ್ – 29 ಗ್ರಾಂ
ಮಾಡುವ ವಿಧಾನ:
- ಒಂದು ಪ್ಯಾನ್ ತೆಗೆದುಕೊಂಡು 1 ಟೀ ಚಮಚ ಎಣ್ಣೆ ಸೇರಿಸಿ - ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹೆಸರಿಸಿದ ತರಕಾರಿಗಳು ಮತ್ತು ಸಣ್ಣಗೆ ಹೆಚ್ಚಿದ ಚಿಕನ್ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 15 ನಿಮಿಷಗಳ ಕಾಲ ಅದನ್ನು ಬೇಯಲು ಬಿಡಿ.
- ಡಂಪ್ಲಿಂಗ್‌ಗಳಿಗೆ ಫಿಲ್ಲಿಂಗ್ ತಯಾರಾಯಿತು – ಅದನ್ನು ಬೇರೊಂದು ತಟ್ಟೆಗೆ ವರ್ಗಾಯಿಸಿ ಮತ್ತು ಸ್ವಲ್ಪ ಹೊತ್ತು ಬೇಯಲು ಬಿಡಿ.
- ಈ ಮಧ್ಯೆ, ಪೂರ್ಣ ಗೋಧಿ ಹಿಟ್ಟನ್ನು ಕಲಸಿ, ಒಂದು ಚಿಟಿಕೆ ಉಪ್ಪು, 1 ಟೀ ಚಮಚ ಎಣ್ಣೆ, ಮತ್ತು ನೀರನ್ನು ಸೇರಿಸಿ ನಾದಿಕೊಳ್ಳಿ. ಮೃದುವಾದ ಹಿಟ್ಟನ್ನು ಕಲಸಿಕೊಳ್ಳಿ ಮತ್ತು ಸ್ವಲ್ಪ ಹೊತ್ತು ಪಕ್ಕಕ್ಕೆ ಇರಿಸಿ.
- ಹಿಟ್ಟನ್ನು 7-8 ಸಮ ಭಾಗಗಳಾಗಿ ಮಾಡಿ, ಅವುಗಳಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಕಟ್ಟಿ. ಉಂಡೆಗಳು ದುಂಡಗೆ ಆಗುವಂತೆ ಲಟ್ಟಿಸಿ.
- ಮಧ್ಯದಲ್ಲಿ ಒಂದು ಚಮಚ ಫಿಲ್ಲಿಂಗ್ ಇರಿಸಿ, ಹಾಗು ಅಚ್ಚು ಬಳಿಸಿ ಡಂಪ್ಲಿಂಗ್‌ಗೆ ಆಕಾರ ನೀಡಿ. ಅಥವಾ ನೀವು ಅದರ ಎಲ್ಲ ಬದಿಗಳನ್ನೂ ಒಟ್ಟು ಮಾಡಿ ಚಿವುಟಬಹುದು.
- ಹಬೆಯ ತಟ್ಟೆಗಳಿಗೆ ಎಣ್ಣೆ ಸವರಿ ಮತ್ತು ಇದನ್ನು 20-30 ನಿಮಿಷಗಳಷ್ಟು ಕಾಲ ಹಬೆಯಲ್ಲಿ ಬೇಯಿಸಿ.
- ಹೊರಗಿನ ಹಿಟ್ಟು ಬೆಂದಿದೆಯೇ ನೋಡಿ ಮತ್ತು ಬಿಸಿಬಿಸಿಯಾಗಿ ಬಡಿಸಿ.