Humrahi

ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಆರು ಮಾರ್ಗಗಳು

ಅಧಿಕ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸದಿದ್ದರೆ, ರೋಗಿಗಳ ಜೀವನದ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಆರು ಮಾರ್ಗಗಳಿವೆ:

ಸರಿಯಾದುದನ್ನು ಸೇವಿಸಿ

  • ಅತಿಯಾದ ಸೋಡಿಯಂ (ಉಪ್ಪು) ಹೊಂದಿರುವ ಆಹಾರವು ದ್ರವವನ್ನು ಉಳಿಸಿಕೊಳ್ಳಲು ಮತ್ತು ಅಧಿಕ BPಗೆ ಕಾರಣವಾಗಬಹುದು.
  • ಪೊಟ್ಯಾಸಿಯಮ್ ಅಧಿಕವಾಗಿರುವ ಆಹಾರಗಳಾದ ಬಾಳೆಹಣ್ಣುಗಳು, ಉಪ್ಪು, ಮಸಾಲೆ ಹಾಕದೆ ಬೇಯಿಸಿದ ಆಲೂಗಡ್ಡೆ, ಆವಕಾಡೊಗಳು ಮತ್ತು ಬೇಯಿಸಿದ ಬಿಳಿ ಬೀನ್ಸ್ ಅನ್ನು ಸೇವಿಸಬೇಕು.

ಮದ್ಯಪಾನದ ಮಿತಿಗಳನ್ನು ಹೊಂದಿಸಿ ಮತ್ತು ತಂಬಾಕು ತ್ಯಜಿಸಿ.

  • ಅಧಿಕ ಪ್ರಮಾಣದ ಆಲ್ಕೋಹಾಲ್ ಸೇವನೆ ಹೃದಯಕ್ಕೆ ಹಾನಿಕಾರಕವಾಗಿದೆ.
  • ಮಹಿಳೆಯರು ದಿನಕ್ಕೆ ಒಂದು ಡ್ರಿಂಕ್ ಮತ್ತು ಪುರುಷರು ಎರಡು ಡ್ರಿಂಕ್ಸ್‌ಗೆ ತಮ್ಮನ್ನು ಮಿತಿಗೊಳಿಸಿಕೊಳ್ಳಬೇಕು.
  • ನಿಮ್ಮ ತಂಬಾಕು ಬಳಕೆಯನ್ನು ತ್ಯಜಿಸುವುದು ಸಹ ಸಹಾಯ ಮಾಡಬಹುದು.

ಒತ್ತಡವನ್ನು ಕಡಿಮೆ ಮಾಡಿ

  • ಒತ್ತಡದ ಪರಿಸ್ಥಿತಿಯು ಅಲ್ಪಾವಧಿಗೆ ರಕ್ತದೊತ್ತಡವನ್ನು ಹೆಚ್ಚಿಸಬಹುದು.
  • ಧ್ಯಾನ ಅಥವಾ ವಾಕಿಂಗ್ ಒತ್ತಡವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.

ನಿರ್ದೇಶನದಂತೆ ಔಷಧೋಪಚಾರಗಳನ್ನು ತೆಗೆದುಕೊಳ್ಳಿ.

  • ನೀವು ಔಷಧೋಪಚಾರಗಳ ಹೆಚ್ಚಿನ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಅವುಗಳು ತೆಗೆದುಕೊಳ್ಳುವುದಕ್ಕಾಗಿ ಒದಗಿಸಲಾದ ನಿರ್ದೇಶನಗಳನ್ನು ಅನುಸರಿಸಲು ಮರೆಯದಿರಿ.

ಕ್ರಿಯಾಶೀಲರಾಗಿರಿ

  • ಹೆಚ್ಚು ಸಕ್ರಿಯವಾಗಿರುವ ಜನರು ಕಡಿಮೆ ಹೃದಯ ಬಡಿತವನ್ನು ಹೊಂದಿರುತ್ತಾರೆ.
  • ಹೃದಯವು ಪ್ರತಿ ಬಾರಿ ಸಂಕುಚಿತಗೊಂಡಾಗ ಕಡಿಮೆ ಕೆಲಸವನ್ನು ಮಾಡಿ ಅಪಧಮನಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
  • ವಯಸ್ಕರು ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಸಕ್ರಿಯವಾಗಿರಬೇಕು.

ನೈಸರ್ಗಿಕ ಪೂರಕವನ್ನು ತೆಗೆದುಕೊಳ್ಳಿ.

  • ಬಲಿತ ಬೆಳ್ಳುಳ್ಳಿ ಸಾರ, ಮೀನಿನ ಎಣ್ಣೆ, ದಾಸವಾಳ, ಹಾಲೊಡಕು ಪ್ರೋಟೀನ್, ಇತ್ಯಾದಿ ಸೇರಿದಂತೆ ಕೆಲವು ನೈಸರ್ಗಿಕ ಪೂರಕಗಳು BP ಅನ್ನು ಕಡಿಮೆಮಾಡಲು ಸಹಾಯ ಮಾಡಬಹುದು.

ಉಲ್ಲೇಖಗಳು:

  1. Stress and High Blood Pressure: What’s the Connection?” Mayo Clinic, 18 Mar. 2021, mayoclinic.org/diseases-conditions/high-blood-pressure/in-depth/stress-and high-blood-pressure/art-20044190.
  2. Robinson, Lawrence. “Blood Pressure and Your Brain – HelpGuide.org.” Https://Www.helpguide.org, Mar. 2020, www.helpguide.org/articles/healthy-living/blood-pressure-and-your-brain.htm.