ಮರುದಿನ ಅದಕ್ಕೆ ಸ್ವಲ್ಪ ನೀರು ಮತ್ತು ಓಟ್ಸ್ ಸೇರಿಸಿ ರುಬ್ಬಿ ಹಿಟ್ಟಿನಂತೆ ಮಾಡಿ.
ಸ್ವಲ್ಪ ಉಪ್ಪು ಸೇರಿಸಿ 30 ನಿಮಿಷಗಳ ಕಾಲ ಹಾಗೇ ಬಿಡಿ.
ಒಂದು ಬಟ್ಟಲಿನಲ್ಲಿ ಚಿಕನ್, ಮೆಣಸಿನ ಪುಡಿ, ಗರಂ ಮಸಾಲ, ಧನಿಯಾ ಪುಡಿ, ಅರಿಶಿನ ಪುಡಿ, ಮೊಸರು, ಕರಿಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಹಾಗೂ 30 – 40 ನಿಮಿಷಗಳ ಕಾಲ ಅದ್ದಿಡಿ.
ಒಂದು ನಾನ್-ಸ್ಟಿಕ್ ತವಾದಲ್ಲಿ ಎಣ್ಣೆ ಕಾಯಿಸಿ, ಅದ್ದಿಟ್ಟ ಚಿಕನ್ ಅನ್ನು ಸೇರಿಸಿ, ಎರಡೂ ಬದಿಯನ್ನು ಸ್ವಲ್ಪ ಕಂದು ಬಣ್ಣ ಬರುವ ತನಕ ಚೆನ್ನಾಗಿ ಬೇಯಿಸಿ, ಬಳಿಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.
ಒಂದು ಬಟ್ಟಲಿನಲ್ಲಿ ಕ್ಯಾರೆಟ್, ಚಿಕನ್, ಈರುಳ್ಳಿ, ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ಮತ್ತು ಕೊತ್ತಂಬರಿ ಸೊಪ್ಪು, ಕರಿಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಬೆರೆಸಿ.
ಒಂದು ತವಾ / ಪ್ಯಾನ್‌ನ ಮೇಲೆ ಸ್ವಲ್ಲಪ ತುಪ್ಪ ಅಥವಾ ಎಣ್ಣೆ ಸವರಿ ಮತ್ತು ಮಿಶ್ರಣವನ್ನು ಸುರಿದು ಬೇಸ್‌ನಂತೆ ಮಾಡಿಕೊಳ್ಳಿ.
ಟಾಪಿಂಗ್ಸ್‌ಗಳನ್ನು ಮತ್ತು ತುರಿದ ಪನೀರ್ / ಚೀಸ್ ಸೇರಿಸಿ ಹಾಗೂ ಸೊಪ್ಪುಗಳನ್ನು ಮತ್ತು ಚಿಲ್ಲಿ ಫ್ಲೇಕ್‌ಗಳನ್ನು ಸಿಂಪಡಿಸಿ. ಅದನ್ನು ಕೆಲವು ನಿಮಿಷಗಳ ಕಾಲ ಮುಚ್ಚಳದಿಂದ ಮುಚ್ಚಿಡಿ. ಈಗ ಸರ್ವ್ ಮಾಡಲು ಪಿಜ್ಜಾ ತಯಾರಾಗಿದೆ.