Humrahi

ಮ್ಯಾಂಗೋ ಯೋಗರ್ಟ್ ಐಸ್‌ಕ್ರೀಂ

ಬೇಕಾಗುವ ಪದಾರ್ಥಗಳು:

  • 2 ಕಪ್ ಮೊಸರು  
  • 2 ಮಾವಿನ ಹಣ್ಣು, ಸಿಪ್ಪೆ ತೆಗೆದು ಹೆಚ್ಚಿದ್ದು
  • 1 ಚಿಟಿಕೆ ಕೇಸರಿ ದಳಗಳು, 2 ಟೇಬಲ್‌ಸ್ಪೂನ್ ಹಾಲಿನಲ್ಲಿ ನೆನೆಸಿದ್ದು
  • 1 ಚಿಟಿಕೆ ಏಲಕ್ಕಿ ಹುಡಿ
  • 2-3 tsp ಜೇನು

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 121 ಕಿಲೋಕ್ಯಾಲರಿ
ಪ್ರೊಟೀನ್: 3 ಗ್ರಾಂ

ಮಾಡುವ ವಿಧಾನ:

  • ಮಾವಿನ ಹಣ್ಣಿನ ಸಿಪ್ಪೆ ತೆಗೆದು ಕತ್ತರಿಸಿ 3-4 ಗಂಟೆಗಳ ಕಾಲ ಫ್ರೀಝ್ ಮಾಡಿ.  
  • ಇದೇವೇಳೆ, ಮೊಸರನ್ನು ಒಂದು ಹತ್ತಿಯ ಬಟ್ಟೆಯಲ್ಲಿ ಚೆನ್ನಾಗಿ ಸೋಸಿ. ಇದರ ನೀರನ್ನು ಒಂದು ಬೌಲ್‌ನಲ್ಲಿ ತೆಗೆದಿಟ್ಟು, ಯೋಗರ್ಟ್‌ನಿಂದ ಹೆಚ್ಚುವರಿ ನೀರು ಹರಿದುಹೋಗಲು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ.  
  • ಈ ಮೊಸರನ್ನು ಫ್ರೋಝನ್ ಮಾವಿನ ಹಣ್ಣಿನ ಜೊತೆಗೆ ಕೇಸರಿ ಮತ್ತು ಏಲಕ್ಕಿ ಹಾಕಿ ನುಣ್ಣಗೆ ಬ್ಲೆಂಡ್ ಮಾಡಿ . ರುಚಿ ನೋಡಿ ಅಗತ್ಯಕ್ಕೆ ತಕ್ಕಷ್ಟು ಜೇನು ಸೇರಿಸಿ.
  • ಈ ಮಿಶ್ರಣವನ್ನು ಫ್ರೀಝರ್ ಸುರಕ್ಷಿತ ಬಾಕ್ಸ್‌ನಲ್ಲಿ ಹಾಕಿ ಫ್ರೀಝ್ ಮಾಡಿ ಮುಚ್ಚಳ ಮುಚ್ಚಿ 3 ಗಂಟೆಗಳ ಕಾಲ ಅಥವಾ ಗಟ್ಟಿಯಾಗುವ ತನಕ ಫ್ರೀಝ್ ಮಾಡಿ. ನಂತರ ಫ್ರಿಜ್‌ನಿಂದ ತೆಗೆದು ಮತ್ತೊಮ್ಮೆ ಬ್ಲೆಂಡರ್‌ಗೆ ಹಾಕಿ ಐಸ್‌ ಗಟ್ಟಿಯನ್ನು ತೆಗೆಯಲು ಬ್ಲೆಂಡ್ ಮಾಡಿ. ಈ ಪ್ರಕ್ರಿಯೆಯನ್ನು ಮತ್ತೊಮ್ಮೆ ಪುನರಾವರ್ತಿಸಿ.  
  • ಮೂರನೇ ಬಾರಿ ಫ್ರೀಝ್ ಮಾಡಿದ ನಂತರ ಮ್ಯಾಂಗೋ ಫ್ರಯೋ ಸವಿಯಲು ಸಿದ್ಧ.

ನಿಮಗೂ ಇಷ್ಟವಾಗಬಹುದು