ಉಪ್ಪು ಮತ್ತು ಹೆಚ್ಚಿನ ಸೋಡಿಯಂಯುಕ್ತ ಆಹಾರವನ್ನು ಸೇವಿಸಬೇಡಿ
- ಅಡುಗೆ ಮಾಡುವಾಗ, ಅಧಿಕ ಉಪ್ಪು ಬಳಕೆಯನ್ನು ಮಾಡಬೇಡಿ.
- ಸಂಸ್ಕರಿಸಿದ ಆಹಾರಗಳು, ತ್ವರಿತ ಆಹಾರ ಮತ್ತು ಕ್ರೀಡಾ ಪಾನೀಯಗಳ ಬಳಕೆಯನ್ನು ಮಾಡಬೇಡಿ.
- ಸಂಸ್ಕರಿಸಿದ ಆಹಾರಗಳು, ತ್ವರಿತ ಆಹಾರ ಮತ್ತು ಕ್ರೀಡಾ ಪಾನೀಯಗಳ ಬಳಕೆಯನ್ನು ಮಾಡಬೇಡಿ.
- ಕ್ಯಾನ್‌ನಲ್ಲಿ ಶೇಖರಿಸಿದ ರೆಡಿ ಆಹಾರಗಳ ಬಳಕೆಯನ್ನು ಮಾಡಬೇಡಿ ಅವುಗಳು ಅಧಿಕ ಉಪ್ಪಿನಂಶವನ್ನು ಹೊಂದಿರುತ್ತವೆ.
ನಿಯಂತ್ರಿತ ಉಸಿರಾಟ
- ಅಂಗಾತವಾಗಿ ಆರಾಮವಾಗಿ ಮಲಗಿಕೊಳ್ಳಿ.
- ನಿಮ್ಮ ಕೈಗಳನ್ನು ನಿಮ್ಮ ಎದೆಯ ಮೇಲೆ ಮತ್ತು ಪಕ್ಕೆಲುಬಿನ ಕೆಳಗೆ ಇರಿಸಿ.
- ನಿಮ್ಮ ಮೂಗಿನ ಮೂಲಕ ನಿಧಾನವಾಗಿ ಉಸಿರಾಡಿ ಮತ್ತು ಹೊಟ್ಟೆಯ ಏರಿಳಿತವನ್ನು ಅನುಭವಿಸಿ.
- ಕಿಬ್ಬೊಟ್ಟೆಯ ಸ್ನಾಯುಗಳನ್ನು ದೃಢವಾಗಿ ಇರಿಸಿಕೊಂಡು ನಿಧಾನವಾಗಿ 5 ಅನ್ನು ಎಣಿಸುತ್ತಾ ಉಸಿರನ್ನು ಬಿಡಿ.
- ನಿಯಮಿತ ಮತ್ತು ನಿಧಾನವಾಗಿ ಉಸಿರಾಡುವ ಮೂಲಕ 10 ಬಾರಿ ಪುನರಾವರ್ತಿಸಿ.
ವಾಕಿಂಗ್ ಅನ್ನು ಆನಂದಿಸಿ
- ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಅಥವಾ ವಾರದ ಹೆಚ್ಚಿನ ದಿನಗಳಲ್ಲಿ ವ್ಯಾಯಾಮ ಮಾಡಿ.
- ಆರಂಭಿಕರಿಗಾಗಿ, ಕಡಿಮೆ ತೀವ್ರತೆಯ ವಾಕಿಂಗ್ ಅಥವಾ ಈಜು ಉತ್ತಮ ಆಯ್ಕೆಗಳಾಗಿವೆ.
- ಯಾವುದೇ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು, ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ನಿಮ್ಮ ಆಹಾರದಲ್ಲಿ ಪೊಟ್ಯಾಸಿಯಮ್‌ಯುಕ್ತ ಆಹಾರಗಳನ್ನು ಸೇರಿಸಿ
- ನೀವು ಸೇರಿಸಬೇಕಾದ ಆಹಾರಗಳಲ್ಲಿ ಗೆಣಸು, ಟೊಮ್ಯಾಟೋ, ಬೀನ್ಸ್, ಕಿತ್ತಳೆ ರಸ, ಬಾಳೆಹಣ್ಣುಗಳು, ಬಟಾಣಿ, ಆಲೂಗಡ್ಡೆ, ಒಣಗಿದ ಹಣ್ಣುಗಳು, ಕಲ್ಲಂಗಡಿ ಮತ್ತು ಕರಬೂಜ ಸೇರಿವೆ.
ಸಂಗೀತವನ್ನು ಆಲಿಸಿ
- ದಿನಕ್ಕೆ 2 ಅಥವಾ 3 ಬಾರಿ ಕನಿಷ್ಠ 30 ನಿಮಿಷಗಳ ಕಾಲ ಸರಿಯಾದ ರೀತಿಯ ಸಂಗೀತವನ್ನು ಆಲಿಸಿ
- ಕಡಿಮೆ-ಗತಿ ಮತ್ತು ಕಡಿಮೆ-ಪಿಚ್, ಸಾಹಿತ್ಯ ಅಥವಾ ಜೋರಾದ ವಾದ್ಯಗಳಿಲ್ಲದ ಸಂಗೀತ ಜನರನ್ನು ಶಾಂತಗೊಳಿಸಬಲ್ಲುದು
ನಿಮ್ಮ ತೂಕವನ್ನು ಮೇಲ್ವಿಚಾರಣೆ ಮಾಡಿ
- ಸರಿಯಾದ ಆಹಾರ ಮತ್ತು ನಿಯಮಿತ ವ್ಯಾಯಾಮವು ಗರ್ಭಾವಸ್ಥೆಯಲ್ಲಿ ನಿಮ್ಮ ತೂಕವನ್ನು ನಿಯಂತ್ರಿಸುವ ಮಾರ್ಗಗಳಾಗಿವೆ
- ಅಧಿಕ ತೂಕವು ಬೆನ್ನು ನೋವು, ಆಯಾಸ ಮತ್ತು ಕಾಲಿನ ಸೆಳೆತದಂತಹ ಹೆಚ್ಚುವರಿ ಗರ್ಭಧಾರಣೆಯ ಸಂಬಂಧಿತ ಆರೋಗ್ಯ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಉಲ್ಲೇಖಗಳು:
- “High Blood Pressure during Pregnancy.” Centers for Disease Control and Prevention, 2019, www.cdc.gov/bloodpressure/pregnancy.htm.
- Kattah, Andrea G., and Vesna D. Garovic. “The Management of Hypertension in Pregnancy.” Advances in Chronic Kidney Disease, vol. 20, no. 3, May 2013, pp. 229–239, https://doi.org/10.1053/j.ackd.2013.01.014.