1.5 tbsp ಎಣ್ಣೆಯನ್ನು ಪ್ಯಾನ್ ಒಂದರಲ್ಲಿ ಹಾಕಿ ಸಾಸಿವೆ ಸಿಡಿಸಿ, ನಂತರ ಇದಕ್ಕೆ ಅರಿಶಿನ ,ಉಪ್ಪು ಮತ್ತು ಆಲೂಗಡ್ಡೆಯನ್ನು ಹಾಕಿ.
ಆಲೂಗಡ್ಡೆಯನ್ನು ಅರಿಶಿನ, ಮೆಣಸಿನ ಹುಡಿ, ಹಸಿಮೆಣಸು, ಕೊತ್ತಂಬರಿ ಹುಡಿ ಮತ್ತು ಸಾಸಿವೆಯೊಂದಿಗೆ ಚೆನ್ನಾಗಿ ಬೆರೆಸಿ.
ಆಲೂಗಡ್ಡೆಯು ಚೆನ್ನಾಗಿ ಬೆಂದು ಕಂದು ಬಣ್ಣಕ್ಕೆ ತಿರುಗುವ ತನಕ 2-3 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ಉರಿಯನ್ನು ಆಫ್ ಮಾಡಿ, ಇದಕ್ಕೆ ತುರಿದ ಪನೀರ್ ಮತ್ತು ಹೆಚ್ಚಿದ ಕೊತ್ತಂಬರಿಯನ್ನು ಸೇರಿಸಿ. ಎಲ್ಲವೂ ಚೆನ್ನಾಗಿ ಬೆರೆಯುವಂತೆ ಮಿಶ್ರಣ ಮಾಡಿ.
ದೋಸೆ ಮಾಡಲು:
ಸಾಮೆ ಅಕ್ಕಿಯನ್ನು 1-2 ಗಂಟೆಗಳ ಕಾಲ ನೆನೆಸಿಡಿ.
ಹ್ಯಾಂಡ್ ಬ್ಲೆಂಡರ್ ಬಳಸಿಕೊಂಡು ಕಾಡುಗೋಧಿ ಮತ್ತು ಸಾಮೆಯನ್ನು ಒಟ್ಟಿಗೆ ರುಬ್ಬಿ.
ಇದಕ್ಕೆ ಯೋಗರ್ಟ್, ನೀರು, ಉಪ್ಪು ಮತ್ತು ಕಾಡು ಗೋಧಿ ಹಿಟ್ಟು ಮತ್ತು ಸಾಮೆ ಅಕ್ಕಿಯನ್ನು ಬೆರೆಸಿ ನುಣ್ಣಗಿನ ಹಿಟ್ಟು ತಯಾರಿಸಿ. ಹಿಟ್ಟು ತುಸು ಗಟ್ಟಿ ಇರಬೇಕು. ಇದನ್ನು ಬದಿಯಲ್ಲಿಇರಿಸಿ.
ದೊಡ್ಡ ನಾನ್ ಸ್ಟಿಕ್ ಪ್ಯಾನ್‌ನಲ್ಲಿ ½ tsp ಎಣ್ಣೆಯನ್ನು ಹಾಕಿ ಒಂದು ನಿಮಿಷಗಳ ಕಾಲ ಬಿಸಿ ಮಾಡಿ.
ಸುಮಾರು 2 ಸೌಟು ಹಿಟ್ಟನ್ನು ಹಾಕಿ ದೊಸೆಯಂತೆ ಹರಡಿ
2 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.
ದೋಸೆಯನ್ನು ಹಗುರವಾಗಿ ಮಗುಚಿ ಹಾಕಿ ಮತ್ತು ಇನ್ನೊಂದು ಬದಿಯನ್ನು 2 ನಿಮಿಷಗಳ ಕಾಲ ಬೇಯಿಸಿ.
ಸರಿಯಾಗಿ ಬೆಂದ ನಂತರ, ಆಲೂಗಡ್ಡೆ ಮತ್ತು ಪನೀರ್ ಫಿಲ್ಲಿಂಗ್ ಅನ್ನು ಮಧ್ಯದಲ್ಲಿ ಹಾಕಿ ದೋಸೆಯನ್ನು ಮಡಚಿ.