ಹೃದಯ ವೈಫಲ್ಯವನ್ನು ನಿರ್ವಹಿಸುವುದು ಸಾಮಾನ್ಯವಾಗಿ ಸರಳವಾದ ವಿಷಯವಲ್ಲ. ದೈಹಿಕವಾಗಿ, ಹೃದಯ ವೈಫಲ್ಯದ ಅನೇಕ ರೋಗಿಗಳಿಗೆ ಅವರು ಮೊದಲು ಮಾಡಲು ಸಾಧ್ಯವಾಗುತ್ತಿದ್ದ ಅದೇ ಕೆಲಸಗಳನ್ನು ನೆರವೇರಿಸಲು ಆಗಾಗ್ಗೆ ಸಾಧ್ಯವಾಗುವುದಿಲ್ಲ. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರೊಂದಿಗೆ, ಅವರು ತಮಗೆ ಸೂಚಿಸಲಾದ ಔಷಧಿಗಳನ್ನು ತೆಗೆದುಕೊಳ್ಳಲು ನೆನಪಿಟ್ಟುಕೊಳ್ಳಬೇಕು, ತಮ್ಮ ಶರೀರಕ್ಕೆ ಹೆಚ್ಚಿನ ಗಮನ ನೀಡಬೇಕು, ಮತ್ತು ತಮ್ಮ ಒತ್ತಡಗಳನ್ನು ನಿಭಾಯಿಸಬೇಕು. ಜೀವನ ಸಂಗಾತಿಗಳು, ಕುಟುಂಬದವರು, ಸ್ನೇಹಿತರು ಮತ್ತು ನೆರೆಕರೆಯವರು ಒದಗಿಸುವ ಶುಶ್ರೂಷೆಯ ಸಹಾಯವು ಹೃದಯ ವೈಫಲ್ಯದ ರೋಗಿಗಳಿಗೆ ತಮ್ಮ ದೀರ್ಘಕಾಲೀನ ಅನಾರೋಗ್ಯವನ್ನು ನಿಭಾಯಿಸಲು ಸಹಾಯ ಮಾಡಬಹುದು.
ಹೃದಯ ವೈಫಲ್ಯದ ರೋಗಿಗಳಿಗೆ ಸಹಾಯ ಒದಗಿಸಲು ಕೆಲವು ಸಲಹೆಗಳು::
- ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರಗಳನ್ನು ತಯಾರಿಸುವುದು, ಪಡೆದುಕೊಳ್ಳುವುದು, ಮತ್ತು ಅಡುಗೆ ಮಾಡುವುದು - ಇಂತಹ ದೈನಂದಿಕ ಕೆಲಸಗಳಲ್ಲಿ ಸಹಾಯ ಮಾಡುವುದು; ಸೂಕ್ತವಾದ ಕ್ಯಾಲರಿ ಸೇವನೆಯನ್ನು ಪ್ರೋತ್ಸಾಹಿಸುವುದು; ತೂಕವು ಅಸಹಜವಾಗಿ ಕಡಿಮೆಯಾಗುವುದರ ಮೇಲೆ ಒಂದು ಕಣ್ಣಿಡುವುದು
- ಮುಟ್ಟುವ, ಆಲಿಸುವ, ಗಮನ ನೀಡುವ, ಹಾಸ್ಯ ಮಾಡುವ ಮೂಲಕ ಸಹಾಯ ಒದಗಿಸುವುದು
- ನಡೆಯಲು, ಸಮತೋಲನದ ವ್ಯಾಯಾಮಗಳನ್ನು ಮಾಡಲು, ಮತ್ತು ಅವರ ಪರಿಸ್ಥಿತಿಯ ಹಂತಕ್ಕೆ ತಕ್ಕಂತಹ ಇತರ ಚಟುವಟಿಕೆಗಳನ್ನು ಮಾಡಲು ಪ್ರೋತ್ಸಾಹಿಸುವುದು.
- ಸೂಚಿಸಲಾದ ಔಷಧಗಳನ್ನು ತೆಗೆದುಕೊಳ್ಳಲು ಫಾರ್ಮಸಿಗೆ ಹೋಗುವುದು, ಸಾಪ್ತಾಹಿಕ ಟ್ಯಾಬ್ಲೆಟ್ ಆರ್ಗನೈಝರ್‌ಗಳನ್ನು ಮಾಡುವುದು, ರೀಫಿಲ್ ಮತ್ತು ರೀಆರ್ಡರ್ ರಿಮೈಂಡರ್‌ಗಳನ್ನು ನಿರ್ವಹಿಸುವುದು.
- ಧೂಮಪಾನ ಮತ್ತು ಮದ್ಯಸೇವನೆಯನ್ನು ನಿಲ್ಲಿಸಲು ಬೆಂಬಲ ನೀಡುವುದು ಮತ್ತು ಪ್ರೋತ್ಸಾಹಿಸುವುದು
- ವೈದ್ಯಕೀಯ ಸಿಬ್ಬಂದಿಯೊಂದಿಗೆ ಚಿಕಿತ್ಸೆಯ ಕ್ರಮದ ಬಗ್ಗೆ ಚರ್ಚಿಸುವುದು ಮತ್ತು ರೋಗಿಯ ಪರವಾಗಿ ಮಾತಾಡುವುದು.
- ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಚಿಕಿತ್ಸೆಗೆ ಯೋಜನೆ ಮಾಡುವುದು ಮತ್ತು ನಿರಂತರ ಆರೈಕೆ ಸಿಗುವಂತೆ ಖಚಿತಪಡಿಸಿಕೊಳ್ಳುವುದು.
- ವಾಡಿಕೆಯ ವೈದ್ಯಕೀಯ ಭೇಟಿಗಳಿಗಾಗಿ ವೇಳಾಪಟ್ಟಿಯನ್ನು ಆಯೋಜಿಸುವುದು.
ಉಲ್ಲೇಖ:
- Kitko L, McIlvennan CK, Bidwell JT, et al. Family Caregiving for Individuals With Heart Failure: A Scientific Statement From the American Heart Association. Circulation. 2020;141(22):e864-e878.