Humrahi

ಮಧುಮೇಹವು ಮಾನಸಿಕ ಆರೋಗ್ಯದ ಮೇಲೆ ಯಾವ ಪರಿಣಾಮಗಳನ್ನು ಬೀರುತ್ತದೆ?

ನಿಮ್ಮ ಮಧುಮೇಹ ಆರೈಕೆ ಯೋಜನೆಗೆ ಮಾನಸಿಕ ಆರೋಗ್ಯ ಸವಾಲುಗಳು ತಡೆಯೊಡ್ಡಬಹುದು. ಆಲೋಚನೆಗಳು, ಭಾವನೆಗಳು, ನಂಬಿಕೆಗಳು ಮತ್ತು ವರ್ತನೆಗಳು ದೇಹದ ವ್ಯವಸ್ಥೆಗಳ ಸರಿಯಾದ ಕಾರ್ಯನಿರ್ವಹಣೆಗಳ ಮೇಲೆ ಪರಿಣಾಮ ಬೀರಬಹುದು. ಚಿಕಿತ್ಸೆ ನೀಡದೆ ಇದ್ದಲ್ಲಿ, ಮಾನಸಿಕ ಆರೋಗ್ಯ ಸಮಸ್ಯೆಗಳು ಮಧುಮೇಹವನ್ನು ಉಲ್ಪಣಗೊಳಿಸಿ, ಇದಕ್ಕೆ ವ್ಯತಿರಿಕ್ತವಾಗಿ ಮಧುಮೇಹ-ಸಂಬಂಧಿ ಸಮಸ್ಯೆಗಳು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಮತ್ತಷ್ಟು ಹದಗೆಡಿಸಬಹುದು.

ಖಿನ್ನತೆಯು ವೈದ್ಯಕೀಯ ಪರಿಸ್ಥಿತಿಯಾಗಿದ್ದು, ಇದರ ಗುಣಲಕ್ಷಣವೆಂದರೆ ಯಾವಾಗಲೂ ಬೇಸರದಿಂದಿರುವುದು ಮತ್ತು ಸಂತೋಷಮಯ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದಿರುವಿಕೆ. ಇದು ನಿಮ್ಮ ಮಧುಮೇಹದ ನಿರ್ವಹಣೆಯೊಂದಿಗೆ ನಿಮ್ಮ ವೃತ್ತಿ ಮತ್ತು ವೈಯುಕ್ತಿಕ ಬದುಕಿನಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಿಮ್ಮ ಸಾಮರ್ಥ್ಯವನ್ನು ಕುಂದಿಸಬಹುದು. ಮಧುಮೇಹವನ್ನು ಉತ್ತಮವಾಗಿ ನಿರ್ವಹಣೆ ಮಾಡದೇ ಇದ್ದಾಗ, ಹೃದ್ರೋಗ, ನರಗಳ ಹಾನಿ ಮುಂತಾದ ತೊಡಕುಗಳ ಅಪಾಯ ಹೆಚ್ಚಾಗುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳು ಮಧುಮೇಹ ಹೊಂದಿಲ್ಲದವರಿಗೆ ಹೋಲಿಸಿದರೆ 2ರಿಂದ 3 ಪಟ್ಟು ಹೆಚ್ಚು ಬಾರಿ ಖಿನ್ನತೆಯನ್ನು ಅನುಭವಿಸುತ್ತಾರೆ. ಥೆರಪಿ, ಔಷಧೋಪಚಾರ ಅಥವಾ ಎರಡರ ಸಂಯೋಜನೆಯನ್ನು ಒಳಗೊಂಡ ಚಿಕಿತ್ಸಾ ಆಯ್ಕೆಗಳು ವಿಶೇಷವಾಗಿ ಹೆಚ್ಚು ಪರಿಣಾಮಕಾರಿ. ಚಿಕಿತ್ಸೆ ನೀಡದಿದ್ದರೆ, ಖಿನ್ನತೆಯು ಸುಧಾರಿಸುವ ಬದಲಾಗಿ ಇನ್ನಷ್ಟು ಹದಗೆಡುವ ಸಂಭವ ಇರುತ್ತದೆ.

ಖಿನ್ನತೆಯ ಲಕ್ಷಣಗಳು ತೀವ್ರತೆಯಲ್ಲಿ ವ್ಯತ್ಯಾಸಗೊಳ್ಳಬಹುದು ಅಥವಾ ಆವರಿಸಿಕೊಳ್ಳಬಹುದು:

  • ಬೇಸರ ಅಥವಾ ಖಾಲಿತನದ ಅನುಭವ
  • ಮೊದಲು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
  • ಅತಿಯಾಗಿ ತಿನ್ನುವುದು ಅಥವಾ ಹಸಿವಾಗದಿರುವುದು
  • ನಿದ್ರಾಹೀನತೆ ಅಥವಾ ಅಧಿಕ ನಿದ್ರೆಯನ್ನು ಒಳಗೊಂಡ ನಿದ್ರೆಯ ತೊಂದರೆಗಳು
  • ಏಕಾಗ್ರತೆಗೆ ಅಥವಾ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು
  • ಸುಸ್ತು
  • ವಿಶ್ವಾಸಹೀನತೆ, ಕಿರಿಕಿರಿ, ಉದ್ವೇಗ ಅಥವಾ ತಪ್ಪಿತಸ್ಥ ಭಾವನೆ ಉಂಟಾಗುವುದು
  • ದೈಹಿಕ ಲಕ್ಷಣಗಳಾದ ನೋವುಗಳು, ತಲೆನೋವು, ಸೆಳೆತ ಅಥವಾ ಜೀರ್ಣಾಂಗ ಸಮಸ್ಯೆಗಳು
  • ಸ್ವಯಂ-ಹಾನಿ ಅಥವಾ ಸಾಯುವ ಆಲೋಚನೆಗಳು

ಒತ್ತಡ ಮತ್ತು ಉದ್ವೇಗ ಪರಿಗಣಿಸಬೇಕಾದ ಇನ್ನಷ್ಟು ಮಾನಸಿಕ ಆರೋಗ್ಯ ಸಮಸ್ಯೆಗಳಾಗಿವೆ. ಒತ್ತಡವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಂಚಾರ ದಟ್ಟಣೆ, ಕೌಟುಂಬಿಕ ಬೇಡಿಕೆಗಳು ಅಥವಾ ಮಧುಮೇಹ ನಿರ್ವಹಣೆಯ ದೈನಂದಿನ ಅಭ್ಯಾಸಗಳಿಂದ ಉಂಟಾಗಬಹುದು. ಒತ್ತಡ ಹಾರ್ಮೋನುಗಳು ರಕ್ತದ ಸಕ್ಕರೆ ಮಟ್ಟದಲ್ಲಿ ಊಹಿಸಲು ಸಾಧ್ಯವಿಲ್ಲದ ಏರುಪೇರುಗಳನ್ನು ಉಂಟುಮಾಡಬಹುದು ಮತ್ತು ಅಸ್ವಸ್ಥತೆ ಅಥವಾ ಗಾಯದಿಂದ ಉಂಟಾಗುವ ದೀರ್ಘಕಾಲಿಕ ಒತ್ತಡವು ರಕ್ತದ ಸಕ್ಕರೆ ಮಟ್ಟವನ್ನು ಅಧಿಕವಾಗಿಸಿ ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಉದ್ವೇಗವು ಚಿಂತೆ, ಭಯ ಅಥವಾ ನಿರಂತರ ಆತಂಕದ ಭಾವನೆಯಿಂದ ಕೂಡಿದ್ದು, ಸಾಮಾನ್ಯವಾಗಿ ಇದು ಮಧುಮೇಹದಂತಹ ದೀರ್ಘಕಾಲಿಕ ಪರಿಸ್ಥಿತಿಯನ್ನು ನಿಭಾಯಿಸುವ ಬೇಡಿಕೆಗಳಿಂದ ಉಂಟಾಗುತ್ತದೆ. ಮಧುಮೇಹ ಹೊಂದಿರುವವರು ಡಯಾಬಿಟಿಸ್ ಡಿಸ್ಟ್ರೆಸ್ ಎಂಬ ಪರಿಸ್ಥಿತಿಯನ್ನು ಅನುಭವಿಸಬಹುದು, ಇದು ಒತ್ತಡ, ಖಿನ್ನತೆ ಮತ್ತು ಉದ್ವೇಗದೊಂದಿಗೆ ಕೆಲವು ಹೋಲಿಕೆಯನ್ನು ಹೊಂದಿದೆ. ಖಿನ್ನತೆಗಿಂತ ಭಿನ್ನವಾಗಿ ಡಯಾಬಿಟಿಸ್ ಡಿಸ್ಟ್ರೆಸ್ ಅನ್ನು ಹೈಪೋಗ್ಲೈಸೀಮಿಯಾ ಅಥವಾ ಕಡಿಮೆ ಮಟ್ಟದ ರಕ್ತದ ಸಕ್ಕರೆಯಂತಹ ಮಧುಮೇಹಕ್ಕೆ ಸಂಬಂಧಿಸಿದ ಸಾಮಾನ್ಯ ವಿಷಯಗಳಿಗೆ ಸಂಬಂಧಿಸಬಹುದು. ಬಾಹ್ಯ ಅಂಶಗಳಾದ ಕೌಟುಂಬಿಕ ಮತ್ತು ಸಮಾಜಿಕ ಬೆಂಬಲ ಮತ್ತು ಆರೋಗ್ಯ ಸೇವೆಗಳು ಕೂಡಾ ಡಯಾಬಿಟಿಸ್ ಡಿಸ್ಟ್ರೆಸ್ ಮೇಲೆ ಪರಿಣಾಮ ಬೀರಬಹುದು. ಡಯಾಬಿಟಿಸ್ ಡಿಸ್ಟ್ರೆಸ್‌ಗೆ ಚಿಕಿತ್ಸೆ ನೀಡಲು ಯಾವುದೇ ವಿಶೇಷವಾದ ಔಷಧೋಪಚಾರಗಳನ್ನು ಬಳಸಲಾಗದಿದ್ದರೂ, ಮಾತಿನ ಚಿಕಿತ್ಸೆ ಮತ್ತು ಥರಪಿ ಹಾಗೂ ಬೆಂಬಲ ಗುಂಪುಗಳು ಸಹಾಯಕವಾಗಬಹುದು

ನೀವು ಖಿನ್ನತೆ, ಒತ್ತಡ ಅಥವಾ ಉದ್ವೇಗದಿಂದ ಬಳಲುತ್ತಿದ್ದೀರಿ ಎಂಬ ಸಂಶಯವಿದ್ದರೆ, ಅಗತ್ಯ ಚಿಕಿತ್ಸೆಗಾಗಿ ನಿಮ್ಮ ವೈದ್ಯರ ಸಲಹೆ ಪಡೆಯುವುದು ತುಂಬಾ ಮುಖ್ಯ. ಖಿನ್ನತೆಯ ಪ್ರಕರಣದಲ್ಲಿ ಒಟ್ಟಾರೆ ಆರೋಗ್ಯ, ಗುಣಮಟ್ಟದ ಜೀವನ ಮತ್ತು ಪರಿಣಾಮಕಾರಿ ಮಧುಮೇಹ ನಿರ್ವಹಣೆಗಾಗಿ ಆರಂಭಿಕ ಚಿಕಿತ್ಸೆಯು ಪ್ರಯೋಜನಕಾರಿ.31,32