Humrahi

ಹೃದಯ ವೈಫಲ್ಯಗಳನ್ನು ನಿರ್ವಹಿಸುವುದರಲ್ಲಿ ತಂತ್ರಜ್ಞಾನವು ಹೇಗೆ ಸಹಾಯ ಮಾಡಬಹುದು? ಧರಿಸಬಹುದಾದ ವಸ್ತುಗಳು (ವೇರೆಬಲ್ಸ್‌) ಮತ್ತು ದೂರದಿಂದ ಮಾಡುವ ಮೇಲ್ವಿಚಾರಣೆ (ರಿಮೋಟ್‌ ಮಾನಿಟರಿಂಗ್‌)ಗಳ ಪಾತ್ರ

ಹೃದಯ ವೈಫಲ್ಯಗಳ ವಿರುದ್ಧದ ಯುದ್ಧದಲ್ಲಿ, ತಂತ್ರಜ್ಞಾನವು ಓರ್ವ ಪ್ರಬಲ ಮಿತ್ರನಾಗಿ ಮೂಡಿಬಂದಿದ್ದು, ಈ ದೀರ್ಘಕಾಲೀನ ಪರಿಸ್ಥಿತಿಯನ್ನು ನಿರ್ವಹಿಸಲು ಮತ್ತು ರೋಗಿಗಳ ಜೀವನಮಟ್ಟವನ್ನು ಸುಧಾರಿಸಲು ನವೀನ ಮಾರ್ಗಗಳನ್ನು ಒದಗಿಸುತ್ತದೆ.

ಧರಿಸಬಹುದಾದ ವಸ್ತುಗಳು ಮತ್ತು ದೂರದಿಂದಲೇ ಮೇಲ್ವಿಚಾರಣೆ ಮಾಡುವ ವ್ಯವಸ್ಥೆಗಳ ಏಕೀಕರಣವು ಆರೋಗ್ಯರಕ್ಷಣೆಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿದ್ದು, ಆರೋಗ್ಯ ರಕ್ಷಣೆಯ ವೃತ್ತಿಯಲ್ಲಿರುವವರಿಗೆ ನೈಜ-ಸಮಯದ ದತ್ತಾಂಶವನ್ನು ಮತ್ತು ರೋಗಿಗಳಿಗೆ ವೈಯಕ್ತಿಕವಾದ ಆರೈಕೆಯನ್ನು ಒದಗಿಸುತ್ತದೆ.

ಧರಿಸಬಹುದಾದ ಸಾಧನಗಳು: ರೋಗಿಗಳನ್ನು ದತ್ತಾಂಶದೊಂದಿಗೆ ಸಶಕ್ತಗೊಳಿಸುವುದು

  • ಸ್ಮಾರ್ಟ್‌ವಾಚ್‌ಗಳು ಮತ್ತು ಫಿಟ್‌ನೆಸ್‌ ಟ್ರ್ಯಾಕರ್‌ಗಳಂತಹ ಧರಿಸಬಹುದಾದ ಸಾಧನಗಳು, ಕೇವಲ ಹೆಜ್ಜೆಗಳನ್ನು ಎಣಿಸುವುದು ಮತ್ತು ಹೃದಯ ಬಡಿತದ ದರವನ್ನು ಮೇಲ್ವಿಚಾರಣೆ ಮಾಡುವ ಹಂತದಿಂದ ಬಹಳಷ್ಟು ಮುಂದೆ ಹೋಗಿದೆ.
  • ಈಗ ಅವು, ಹೃದಯ ಬಡಿತದ ದರ, ರಕ್ತದೊತ್ತಡ, ಆಕ್ಸಿಜನ್‌ ಸ್ಯಾಚುರೇಶನ್‌ಗಳಂತಹ ಹಲವಾರು ಆರೋಗ್ಯದ ಅಂಶಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಮತ್ತು ಏಟ್ರಿಯಲ್‌ ಫಿಬ್ರಿಲೇಶನ್‌ನಂತಹ ಅನಿಯಮಿತ ಹೃದಯ ಮಿಡಿತಗಳನ್ನೂ ಕೂಡ ಪತ್ತೆ ಮಾಡುವ ಮೂಲಕ ಹೃದಯ ವೈಫಲ್ಯದ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
  • ಈ ನೈಜ-ಸಮಯದ ದತ್ತಾಂಶಗಳ ಹರಿವುಗಳು ರೋಗಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ತಾವೇ ಮುಂದಾಗಿ ಕಾಳಜಿ ವಹಿಸಲು ಶಕ್ತರನ್ನಾಗಿಸಿ, ಅವರಿಗೆ ಸಂಭಾವ್ಯ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಲು ಮತ್ತು ತ್ವರಿತವಾಗಿ ವೈದ್ಯಕೀಯ ಸಹಾಯವನ್ನು ಪಡೆಯಲು ಸಮರ್ಥರನ್ನಾಗಿ ಮಾಡುತ್ತದೆ.

ದೂರದಿಂದ ಮೇಲ್ವಿಚಾರಣೆ: ಆರೋಗ್ಯ ರಕ್ಷಣೆಯಲ್ಲಿರುವ ಅಂತರಗಳನ್ನು ಕಡಿಮೆ ಮಾಡುವುದು

  • ದೂರದಿಂದಲೇ ಮೇಲ್ವಿಚಾರಣೆ ಮಾಡುವಂತಹ ವ್ಯವಸ್ಥೆಗಳು ಆರೋಗ್ಯ ರಕ್ಷಣೆಯ ವೃತ್ತಿಯಲ್ಲಿರುವವರಿಗೆ, ಹೃದಯ ವೈಫಲ್ಯದ ರೋಗಿಗಳು ನಿಯಮಿತವಾಗಿ ಕ್ಲಿನಿಕ್‌ಗೆ ಭೇಟಿ ಮಾಡದೆಯೇ ಅವರ ಮೇಲೆ ನಿಕಟವಾಗಿ ಕಣ್ಣಿಡಲು ಅವಕಾಶ ಮಾಡಿಕೊಡುತ್ತದೆ.
  • ಈ ವ್ಯವಸ್ಥೆಗಳು, ಧರಿಸಬಹುದಾದ ಸಾಧನಗಳಿಂದ ದತ್ತಾಂಶವನ್ನು ಆರೋಗ್ಯ ರಕ್ಷಣೆಯ ವೃತ್ತಿಯಲ್ಲಿರುವವರಿಗೆ ರವಾನಿಸಿ, ಅವರು ರೋಗಿಗಳ ಪ್ರಗತಿಯನ್ನು ಗುರುತಿಸಲು, ಚಿಕಿತ್ಸೆಯ ಕ್ರಮಗಳನ್ನು ಸರಿಹೊಂದಿಸಲು, ಮತ್ತು ಅವಶ್ಯಕವಾದಾಗ ತಾವೇ ಮುಂದಾಗಿ ಮಧ್ಯಪ್ರವೇಶಿಸಲು ಅವರಿಗೆ ಅವಕಾಶ ಮಾಡಿಕೊಡುತ್ತದೆ.
  • ಇದರ ಪರಿಣಾಮವಾಗಿ, ದೂರದಿಂದ ಮೇಲ್ವಿಚಾರಣೆ ಮಾಡುವುದು ಆಸ್ಪತ್ರೆಗೆ ಮರುದಾಖಲಾಗುವುದನ್ನು ಕಡಿಮೆ ಮಾಡುತ್ತದೆ, ರೋಗಿಗಳು ಸೂಚನೆಗಳ ಅನುಪಾಲನೆ ಮಾಡುವುದನ್ನು ಸುಧಾರಿಸುತ್ತದೆ, ಮತ್ತು ಸಮಯಕ್ಕೆ ಸರಿಯಾದ ವೈದ್ಯಕೀಯ ಆರೈಕೆ ದೊರಕುವುದನ್ನು ಸುಗಮಗೊಳಿಸುತ್ತದೆ.

ಉಲ್ಲೇಖಗಳು:

  1. Chaudhry, S. I., Mattera, J. A., Curtis, J. P., Spertus, J. A., Herrin, J., Lin, Z., … & Krumholz, H. M. (2010). Telemonitoring in patients with heart failure. New England Journal of Medicine, 363(24), 2301-2309.
  2. Marzegalli, M., Lunati, M., Landolina, M., Perego, G. B., Ricci, R. P., Guenzati, G., … & Curnis, A. (2013). Remote monitoring of CRT-ICD: The multicenter Italian CareLink evaluation–ease of use, acceptance, and organizational implications. Pacing and Clinical Electrophysiology, 36(1), 60-68.

ಇತ್ತೀಚಿನ ಪೋಸ್ಟ್