Humrahi

ಗ್ರಿಲ್ಡ್‌ ಲೆಮನ್ ಚಿಕನ್‌

ಬೇಕಾಗುವ ಪದಾರ್ಥಗಳು:

  • ಚಿಕನ್‌ ಎದೆಭಾಗ (ಮೂಳೆಗಳಿಲ್ಲದಂತೆ, ಚರ್ಮ ಸುಲಿದು) – 200ಗ್ರಾಂ
  • ಮೊಸರು – 3 ಟೇಬಲ್‌ ಚಮಚ (45-50 ಗ್ರಾಂ)
  • ಲಿಂಬೆ ರಸ – 2 ಟೇಬಲ್‌ ಚಮಚ
  • ಕೊತ್ತಂಬರಿಸೊಪ್ಪು – 8-10 ಎಲೆಗಳು
  • ಬೆಳ್ಳುಳ್ಳಿ – 2 ಎಸಳು
  • ಸಾಸಿವೆ ಎಣ್ಣೆ – 2 ಟೀ ಚಮಚ
  • ಒಣಗಿದ ಒರಿಗೆನೊ – 1 ಟೀ ಚಮಚ
  • ಉಪ್ಪು ಮತ್ತು ಕರಿಮೆಣಸು – ರುಚಿಗೆ

ಪೌಷ್ಟಿಕಾಂಶ ಮೌಲ್ಯ:

ಕ್ಯಾಲರಿಗಳು - 300 ಕ್ಯಾಲರಿ
ಪ್ರೊಟೀನ್ - 53g

ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೊಸರು, ಮಸಾಲೆಗಳು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಚಿಕನ್‌ ಸೇರಿಸಿ ಅದ್ದಿಟ್ಟು ಮಾಡಿಕೊಳ್ಳಿ, ಚೆನ್ನಾಗಿ ಬೆರೆಸಿ ಒಳ್ಳೆಯ ಲೇಪನವಾಗುವಂತೆ ನೋಡಿಕೊಳ್ಳಿ.
  2. ಒಂದು ಪ್ಯಾನ್‌ನಲ್ಲಿ ಸಾಸಿವೆ ಎಣ್ಣೆ ಕಾಯಿಸಿ ಅದ್ದಿಟ್ಟಿಗೆ ಎಣ್ಣೆಯನ್ನು ಸೇರಿಸಿ.
  3. ಈ ಮಿಶ್ರಣವು ಕನಿಷ್ಠ 30 ನಿಮಿಷಗಳ ಕಾಲ ಫ್ರಿಜ್‌ನಲ್ಲಿ ಅದ್ದಿಟ್ಟಾಗಲಿ, ಕೆಲವು ಗಂಟೆಗಳ ಕಾಲ ಇಟ್ಟರೆ ಒಳ್ಳೆಯದು.
  4. ಗ್ರಿಲ್‌ ಪ್ಯಾನ್‌ ತೆಗೆದುಕೊಳ್ಳಿ – ಚಿಕನ್ ಅನ್ನು, ಅದು ಮೃದುವಾಗುವ ತನಕ, 20-25 ನಿಮಿಷಗಳ ಕಾಲ ಬೇಯಿಸಿ.
  5. ಲಿಂಬೂ ರಸ ಮತ್ತು ತಾಜಾ ಕೊತ್ತಂಬರಿ ಸೊಪ್ಪಿನಿಂದ ಅದನ್ನು ಅಲಂಕರಿಸಿ.

ನಿಮಗೂ ಇಷ್ಟವಾಗಬಹುದು