Humrahi

ಯುವ ಭಾರತೀಯರಲ್ಲಿ ಡಿಸ್ಲಿಪಿಡೆಮಿಯ

ರಕ್ತದ ಲಿಪಿಡ್‌ ಮಟ್ಟಗಳಲ್ಲಿ ಅಸಮತೋಲನವು ಯುವ ಭಾರತೀಯರಲ್ಲಿ ಆತಂಕಕಾರಿ ಆರೋಗ್ಯ ಸಮಸ್ಯೆಯಾಗಿದೆ ಮತ್ತು ಹಿರಿಯರಲ್ಲಿ ಅದು ಪಾರಂಪರಿಕವಾದ ಸಂಬಂಧ ಹೊಂದಿದೆ.

ಡಿಸ್ಲಿಪಿಡೆಮಿಯದ ಕಾರಣಗಳು

  • ಜಡವಾದ ಜೀವನಶೈಲಿ: ವ್ಯಾಯಾಮದ ಕೊರತೆಯು ಲಿಪಿಡ್‌ ಚಯಾಪಚಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
  • ಅನಾರೋಗ್ಯಕರ ಆಹಾರಕ್ರಮ: ಅಧಿಕ ಕ್ಯಾಲರಿ, ಸಂಸ್ಕರಿತ ಆಹಾರಗಳು ಮತ್ತು ಸ್ಯಾಚ್ಯುರೇಟೆಡ್‌ ಕೊಬ್ಬಿನಂಶಗಳ ಸೇವನೆಯು ಯುವ ಪೀಳಿಗೆಯಲ್ಲಿ ವ್ಯಾಪಕವಾಗಿದೆ.
  • ಬೊಜ್ಜು: ಅತಿಯಾದ ದೇಹ ತೂಕವು ಯುವ ಪೀಳಿಗೆಗಳಲ್ಲಿ ಕ್ಷಿಪ್ರವಾಗಿ ಹಬ್ಬುತ್ತಿದೆ.
  • ವಂಶವಾಹಿ: ವಂಶವಾಹಿಗಳ ಭಿನ್ನತೆ ಮತ್ತು ಕೌಟುಂಬಿಕ ಇತಿಹಾಸಗಳು ಅವರನ್ನು ಡಿಸ್ಲಿಪಿಡೆಮಿಯಕ್ಕೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ.

ಡಿಸ್ಲಿಪಿಡೆಮಿಯದ ಫಲಿತಾಂಶಗಳು

  • ಹೃದಯ ರಕ್ತನಾಳದ ಕಾಯಿಲೆ: ಲಿಪಿಡ್‌ಗಳು ಅಧಿಕ ಮಟ್ಟದಲ್ಲಿದ್ದರೆ ಪರಿಧಮನಿಯ ಕಾಯಿಲೆ, ಹೃದಯಾಘಾತಗಳು, ಮತ್ತು ಪಾರ್ಶ್ವವಾಯುಗಳಂತಹ ಹೃದಯ ರಕ್ತನಾಳದ ಕಾಯಿಲೆಗಳ ಅಪಾಯ ಹೆಚ್ಚುತ್ತವೆ.
  • ಮೆಟಬಾಲಿಕ್‌ ಸಿಂಡ್ರೋಮ್:‌ ಇದರಿಂದ ಅಧಿಕ ರಕ್ತದೊತ್ತಡ, ಇನ್ಸುಲಿನ್‌ ಪ್ರತಿರೋಧ, ಮತ್ತು ಕಿಬ್ಬೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ.
  • ದೀರ್ಘ ಕಾಲದಲ್ಲಿ ಆರೋಗ್ಯದ ಮೇಲೆ ಆಗುವ ಪರಿಣಾಮಗಳು: ಯುವ ವ್ಯಕ್ತಿಗಳಲ್ಲಿ, ಜೀವನದ ಇಳಿ ವಯಸ್ಸಿನಲ್ಲಿ ತೀವ್ರ ಪರಿಣಾಮಗಳನ್ನು ಬೀರಿ, ನಿರೀಕ್ಷಿತ ಜೀವಿತಾವಧಿ ಕಡಿಮೆಯಾಗಲು ಕಾರಣವಾಗಬಹುದು.

ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಜೀವನಶೈಲಿಯ ಮಾರ್ಪಾಡುಗಳು: ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆಗಳು, ಹಾಗೂ ಸಂಸ್ಕರಿಗೆ ಆಹಾರಗಳು ಮತ್ತು ಸ್ಯಾಚ್ಯುರೇಟೆಡ್‌ ಕೊಬ್ಬುಗಳನ್ನು ಸೀಮಿತಗೊಳಿಸಿ, ಹಣ್ಣುಗಳು, ತರಕಾರಿಗಳು, ಪೂರ್ಣ ಧಾನ್ಯಗಳು, ಮತ್ತು ಲಘು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರಕ್ರಮ.
  • ತೂಕದ ನಿರ್ವಹಣೆ: ವ್ಯಾಯಾಮ ಮತ್ತು ಪೌಷ್ಟಿಕ ಆಹಾರ ಕ್ರಮದ ಸಂಯೋಜನೆಯ ಮೂಲಕ ಆರೋಗ್ಯಕರ ತೂಕವನ್ನು ಉಳಿಸಿಕೊಳ್ಳುವುದು ಅವಶ್ಯಕವಾಗಿದೆ.
  • ನಿಯಮಿತ ಆರೋಗ್ಯ ತಪಾಸಣೆಗಳು: ಯುವ ಭಾರತೀಯರು ಮೊದಲ ಹಂತದಲ್ಲಿಯೇ ನಿಯಮಿತವಾದ ಆರೋಗ್ಯ ತಪಾಸಣೆಗಳಿಗೆ ಆದ್ಯತೆ ನೀಡಬೇಕು.
  • ಶಿಕ್ಷಣ ಮತ್ತು ಜಾಗೃತಿ: ಯುವ ಭಾರತೀಯರಲ್ಲಿ ಡಿಸ್ಲಿಪಿಡೆಮಿಯದ ಅಪಾಯಗಳ ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮಹತ್ವದ್ದಾಾಗಿದೆ.

ಉಲ್ಲೇಖಗಳು:

  1. Dalal J, Deb PK, Shrivastava S, Rao MS, et al. Vascular Disease in Young Indians (20–40 Years): Role of Dyslipidemia J Clin Diagn Res. 2016;10(7):OE01-OE5.
  2. Sawant AM, Shetty D, Mankeshwar R, et al. Prevalence of dyslipidemia in the young adult Indian population The Journal of the Association of Physicians of India. 2008 Feb; 56:99–102. PMID: 18472509.

ಇತ್ತೀಚಿನ ಪೋಸ್ಟ್