Humrahi

ಚಾಕ್ಲೇಟ್ ಬಾದಾಮಿ ಮತ್ತು ಬೆರ್ರಿ ಕೇಕ್

Chocolate Almond and Berry Cake

ಬೇಕಾಗುವ ಪದಾರ್ಥಗಳು:

1 tsp ರೇಪ್ಸೀಡ್ ಎಣ್ಣೆ (ಕೇಕ್ ಟಿನ್‌)
50 g ಗೋಧಿ ಹಿಟ್ಟು
50 g ಮೈದಾ
15 g ಕಾರ್ನ್ ಫ್ಲೋರ್
1 tsp ಬೇಕಿಂಗ್ ಪೌಡರ್
15 g ಕೋಕೋ ಪೌಡರ್
4 ಮೊಟ್ಟೆಗಳು
1 tbsp 0% ಕೊಬ್ಬಿನ ಗ್ರೀಕ್ ಯೋಗರ್ಟ್
4 tbsp ಗ್ರ್ಯಾನ್ಯುಲೇಟಡ್ ಸ್ವೀಟ್‌ನರ್
2 tsp ನೈಸರ್ಗಿಕ ಬಾದಾಮಿ ಸಾರ

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 111 ಕಿಲೋಕ್ಯಾಲರಿ
ಪ್ರೊಟೀನ್: 7.9 ಗ್ರಾಂ

ಮಾಡುವ ವಿಧಾನ:

  • ಓವನ್ ಅನ್ನು 190°C ಗೆ ಬಿಸಿ ಮಾಡಿ ಮತ್ತು 20 cm ಕೇಕ್ ಟಿನ್‌ಗೆ ಸ್ವಲ್ಪ ಎಣ್ಣೆ ಸವರಿ
  • ಗೋಧಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಬೇಕಿಂಗ್ ಪೌಡರ್ ಮತ್ತು ಕೋಕೋ ಪೌಡರ್ ಅನ್ನು ಜರಡಿ ಹಿಡಿದು ಒಂದು ಬೌಲ್‌ಗೆ ಹಾಕಿ.
  • ಮತ್ತೊಂದು ಬೌಲ್‌ನಲ್ಲಿ ಮೊಟ್ಟೆಯ ಹಳದಿ, ಯೋಗರ್ಟ್, ಸ್ವೀಟ್‌ನರ್ ಮತ್ತು ಬಾದಾಮಿ ಸಾರವನ್ನು ಹಾಕಿ ಚೆನ್ನಾಗಿ ಬೀಟ್ ಮಾಡಿ
  • ಪ್ರತ್ಯೇಕ ಬೌಲ್ ಒಂದರಲ್ಲಿ ಮೊಟ್ಟೆಯ ಬಿಳಿ ಲೋಳೆಯನ್ನು ಚೆನ್ನಾಗಿ ಬೀಟ್‌ ಮಾಡಿ ಕ್ರೀಮ್ ತಯಾರಿಸಿಕೊಳ್ಳಿ
  • ಶುಷ್ಕ ಪದಾರ್ಥಗಳು, ಮೊಟ್ಟೆಯ ಹಳದಿ ಮತ್ತು ಯೋಗರ್ಟ್ ಮಿಶ್ರಣವನ್ನು ನಿಧಾನಕ್ಕೆ ಕಲಸಿ, ನಂತರ ಇದಕ್ಕೆ ಮೊಟ್ಟೆಯ ಬಿಳಿ ಲೋಳೆಯನ್ನು ಸೇರಿಸಿ ಪುನಃ ಕಲಸಿ
  • ಈ ಮಿಶ್ರಣವನ್ನು ಕೂಡಲೇ ಎಣ್ಣೆ ಸವರಿದ ಕೇಕ್ ಟಿನ್‌ಗೆ ವರ್ಗಾಯಿಸಿ 20-25 ನಿಮಿಷಗಳ ಕಾಲ ಬೇಕ್ ಮಾಡಿ, ನಂತರ ಓವೆನ್‌ನಿಂದ ತೆಗೆದು ವಯರ್ ರ್‍ಯಾಕ್ ಮೇಲೆ ತಣಿಯಲು ಬಿಡಿ
  • ಇದೇವೇಳೆ, 1 ಟೇಬಲ್‌ಸ್ಪೂನ್ ಸ್ವೀಟ್‌ನರ್ ಅನ್ನು ಕದಡುತ್ತಾ ಉಂಟಾಗುವ ಕ್ರೀಮ್‌ನಿಂದ ಟಾಪಿಂಗ್ ತಯಾರಿಸಿ, ಇದನ್ನು ನೀವು ಕೇಕ್‌ ಮೇಲೆ ಹಚ್ಚುವ ತನಕ ಫ್ರಿಡ್ಜ್‌ನಲ್ಲಿ ಇಡಿ
  • ಕೇಕ್ ತಣ್ಣಗಾದ ನಂತರ ಈ ಸಿಹಿಯಾದ ಕ್ರೀಮ್‌ ಅನ್ನು ಕೇಕ್ ಮೇಲೆ ಸಂಪೂರ್ಣವಾಗಿ ಹಚ್ಚಿ ತಾಜಾ ಸ್ಟ್ರಾಬೆರಿಗಳು ಮತ್ತು ರಸ್‌ಬೆರಿಗಳಿಂದ ಟಾಪ್ ಮಾಡಿ

ನಿಮಗೂ ಇಷ್ಟವಾಗಬಹುದು