ಮೂಳೆಗಳಿಲ್ಲದ ಚಿಕನ್ ಎದೆಭಾಗ, ಉದ್ದಕೆ ಕತ್ತರಿಸಿ – 125ಗ್ರಾಂ
ಯೋಗರ್ಟ್ - ¼ ಕಪ್ [60 ಮಿ.ಲಿ.]
ಲಿಂಬೆ ರಸ - ½ ಟೀ ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 7.5ಗ್ರಾಂ
ಕೆಂಪು ಮೆಣಸಿನ ಪುಡಿ – ½ ಟೀ ಚಮಚ
ಅರಿಶಿನ ಪುಡಿ - ½ ಟೀ ಚಮಚ
ಗರಂ ಮಸಾಲ ಪುಡಿ - ½ ಟೀ ಚಮಚ
ಜೀರಿಗೆ ಪುಡಿ - ½ ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ – 1 ಟೇಬಲ್ ಚಮಚ
ಈರುಳ್ಳಿ – 50ಗ್ರಾಂ
ಟೊಮಾಟೊ – 50 ಗ್ರಾಂ
ಪೂರ್ಣ ಗೋಧಿ ಹಿಟ್ಟು – 30 ಗ್ರಾಂ
ಕೊತ್ತಂಬರಿ ಸೊಪ್ಪು - 15 ಗ್ರಾಂ ತಾಜಾ
ಪುದಿನಾ ಎಲೆಗಳು – 15 ಗ್ರಾಂ
ಹಸಿ ಮೆಣಸಿನ ಕಾಯಿ - 1-2
ಶುಂಠಿ– 5 ಗ್ರಾಂ
ಉಪ್ಪು - ರುಚಿಗೆ ತಕ್ಕಷ್ಟು
ಪೌಷ್ಟಿಕಾಂಶ ಮೌಲ್ಯ:
ಕ್ಯಾಲರಿಗಳು - 392ಕ್ಯಾಲರಿ ಪ್ರೊಟೀನ್ - 36 ಗ್ರಾಂ
ಮಾಡುವ ವಿಧಾನ:
ಚಿಕನ್ ಅನ್ನು ಮೊಸರು ಲಿಂಬೆ ರಸ -ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಅರಿಶಿನ, ಗರಂ ಮಸಾಲ, ಜೀರಿಗೆ ಪುಡಿ, ಮತ್ತು ಉಪ್ಪು ಸೇರಿಸಿ ಅದ್ದಿಟ್ಟು ಮಾಡಿ 30 ನಿಮಿಷಗಳ ಕಾಲ ಬಿಡಿ. ಅದ್ದಿಟ್ಟಿನಿಂದ ಚಿಕನ್ ಅನ್ನು ಪೂರ್ತಿಯಾಗಿ ಸವರಿರುವುದನ್ನು ಖಚಿತಪಡಿಸಿಕೊಳ್ಳಿ.
ಪೂರ್ಣ ಗೋಧಿ ಹಿಟ್ಟನ್ನು ಕಲಸಿಕೊಳ್ಳಿ ಮತ್ತು ಪಕ್ಕಕ್ಕೆ ಇರಿಸಿ.
ಗ್ರಿಲ್ ಪ್ಯಾನ್ ಅನ್ನು ಕಾಯಿಸಿ - 1 ಟೀ ಚಮಚ ಎಣ್ಣೆ ಮತ್ತು ಅದ್ದಿಟ್ಟ ಚಿಕನ್ ಅನ್ನು ಸೇರಿಸಿ, ಎಣ್ಣೆ ಸಿಂಪಡಿಸಿ ಮತ್ತು ಅದನ್ನು 15-20 ನಿಮಿಷಗಳಷ್ಟು ಕಾಲ ಬೇಯಲು ಬಿಡಿ. ಎರಡೂ ಬದಿಗಳನ್ನು ಬೇಯಿಸಿ.
ಚಿಕನ್ ಟಿಕ್ಕ ತಯಾರಾಗಿದೆ – ಕೊತ್ತಂಬರಿ ಸೊಪ್ಪಿನಿಂದ ಅದನ್ನು ಅಲಂಕರಿಸಿ.
ಕೊತ್ತಂಬರಿ ಸೊಪ್ಪು, ಪುದಿನಾ ಎಲೆಗಳು, ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಲಿಂಬೆ ರಸ, ಮತ್ತು ಉಪ್ಪನ್ನು ಸ್ವಲ್ಪ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಮೃದುವಾಗುವಂತೆ ಮಾಡಿ. ಅಗತ್ಯವಿರುವಷ್ಟು ನೀರು ಸೇರಿಸಿಕೊಂಡು ಬೇಕಾದ ಮಂದತೆಗೆ ತನ್ನಿ.
ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ ಮತ್ತು ಸ್ವಲ್ಪ ಎಣ್ಣೆಯೊಂದಿಗೆ ತವಾದ ಮೇಲೆ ತಿಳಿ ಕಂದು ಬಣ್ಣ ಬರುವವರೆಗೆ ಬೇಯಿಸಿ.
ಜೋಡಣೆಗೆ – ಚಪಾತಿಯ ಮೇಲೆ ಹಸಿರು ಚಟ್ನಿಯ ಒಂದು ಪದರವನ್ನು ಹಸರಿಸಿ. ಕೆಲವು ಚಿಕನ್ ಟಿಕ್ಕ ತುಂಡುಗಳನ್ನು ಇರಿಸಿ. ಅವುಗಳ ಮೇಲೆ ಸ್ಲೈಸ್ ಮಾಡಿದ ಈರುಳ್ಳಿ, ಟೊಮಾಟೊ, ಸೌತೆಕಾಯಿ, ಮತ್ತು ತಾಜಾ ಸೊಪ್ಪಿನಿಂದ ಅಲಂಕರಿಸಿ. ವ್ರ್ಯಾಪಿಂಗ್ ಕಾಗದದ ಸಹಾಯದಿಂದ ಚಪಾತಿಯನ್ನು ಎಚ್ಚರಿಕೆಯಿಂದ ರೋಲ್ ಮಾಡಿ.