Humrahi

ಚಿಕನ್‌ ಕ್ವಿನೋವ ಸಲಾಡ್

ಬೇಕಾಗುವ ಪದಾರ್ಥಗಳು:

  • ಚಿಕನ್‌ ಎದೆಭಾಗ -50 ಗ್ರಾಂ
  •  ಕ್ವಿನೊವ – 30ಗ್ರಾಂ
  • ಟೊಮಾಟೊ -1/2 ಲೆಕ್ಕ (65 ಗ್ರಾಂ)
  • ಗ್ರೀನ್‌ ಬೆಲ್ ಪೆಪ್ಪರ್ -1/4 ಲೆಕ್ಕ (30 ಗ್ರಾಂ)
  • ಈರುಳ್ಳಿ - 3/4 ಕಪ್ (150 ಗ್ರಾಂ)
  • ಎಣ್ಣೆ - 1 ಟೇಬಲ್‌ ಚಮಚ
  • ಲಿಂಬೆ ರಸ -1 ಟೇಬಲ್‌ ಚಮಚ

ಪೌಷ್ಟಿಕಾಂಶ ಮೌಲ್ಯ:

ಕ್ಯಾಲರಿಗಳು - 260 ಕ್ಯಾಲರಿ
ಪ್ರೊಟೀನ್ – 15.5 ಗ್ರಾಂ

ಮಾಡುವ ವಿಧಾನ:

  1. ಕ್ವಿನೊವವನ್ನು 3-4 ಗಂಟೆಗಳ ಕಾಲ ನೆನೆಸಿಡಿ.
  2. ಒಂದು ಪ್ಯಾನ್‌ ತೆಗೆದುಕೊಂಡು 2 ಕಪ್ಗಳಷ್ಟು ನೀರು ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ. ಕ್ವಿನೊವವನ್ನು ಸೇರಿಸಿ ಅದು ಮೃದುವಾಗುವವರೆಗೆ ಬೇಯಿಸಿ.
  3. ಚಿಕನ್‌ ಅನ್ನು 15-20 ನಿಮಿಷಗಳಷ್ಟು ಕಾಲ ಪ್ರೆಷರ್‌ ಕುಕ್ಕರ್‌ನಲ್ಲಿ ಬೇಯಿಸಿ. ಮುಚ್ಚಳ ತೆಗೆದು ಸ್ವಲ್ಪ ಸಮಯ ಅದನ್ನು ಆರಲು ಬಿಡಿ.
  4. ಈ ಮಧ್ಯ, ಮೇಲೆ ಹೇಳಿದ ಎಲ್ಲ ತರಕಾರಿಗಳನ್ನು ಹೆಚ್ಚಿಡಿ.
  5. ಎಲ್ಲವನ್ನು ಒಟ್ಟಿಗೆ ಜೋಡಿಸಿ – ಒಂದು ಬಟ್ಟಲಿನಲ್ಲಿ ಕ್ವಿನೊವ, ಚಿಕನ್‌ ಮತ್ತು ಕತ್ತರಿಸಿದ ತರಕಾರಿಗಳನ್ನು ಒಟ್ಟಿಗೆ ಮಿಶ್ರ ಮಾಡಿ, ರುಚಿಗೆ ತಕ್ಕಂತೆ ಒಗ್ಗರಣೆ ಮತ್ತು ಲಿಂಬೆ ರಸ ಸೇರಿಸಿ.
  6. ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ನಿಮಗೂ ಇಷ್ಟವಾಗಬಹುದು