ಮೀನನ್ನು 1 ಇಂಚು ದಪ್ಪದ ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ.
ಈರುಳ್ಳಿ ಮತ್ತು ಟೊಮಾಟೊಗಳನ್ನು ಕತ್ತರಿಸಿ ತಯಾರಾಗಿ ಇರಿಸಿಕೊಳ್ಳಿ.
ಹುಣಿಸೆಯನ್ನು ½ ಕಪ್ ಬೆಚ್ಚಗಿನ ನೀರಿನಲ್ಲಿ ಕೆಲವು ನಿಮಿಷಗಳಷ್ಟು ಕಾಲ ನೆನೆಸಿಡಿ.
ಹುಣಿಸೆಯನ್ನು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಕಿವುಚಿ ಹುಣಿಸೆ ನೀರನ್ನು ಹಿಂಡಿಕೊಳ್ಳಿ.
ಹುಣಿಸೆ ನೀರನ್ನು ಬಸಿದು ಪಕ್ಕಕ್ಕೆ ಇರಿಸಿ. 100 ಮಿ.ಲಿ. ನೀರನ್ನು ಸೇರಿಸಿ ಹುಣಿಸೆಯಿಂದ ಉಳಿದ ಸಾರವನ್ನು ಕಿವುಚಿ.
ಪುನಃ ಬಸಿದು ಪಕ್ಕಕ್ಕೆ ಇರಿಸಿ. ಹುಣಿಸೆ ನೀರನ್ನು ಬಳಸಿ ಗಮನಿಸಿ: ಹುಣಿಸೆಯ ಪೇಸ್ಟ್ (ದಪ್ಪನೆಯ ಮತ್ತು ಎರಡು ಪಟ್ಟು ಸಾಂದ್ರವಾಗಿರುವುದು, ಅಂಗಡಿಯಿಂದ ಖರೀದಿಸಿದ್ದು) ಅನ್ನು ಬಳಸುವುದಾದರೆ, ಕರ್ರಿಯ ಅಗತ್ಯಕ್ಕೆ ಅನುಗುಣವಾಗಿ ಕೇವಲ ನೀರು ಸೇರಿಸಿ.
ನೀವು ಬಯಸುವ ಹುಳಿ ರುಚಿಗೆ ತಕ್ಕಂತೆ ಹುಣಿಸೆಯನ್ನು ಬಳಸಿ.
ಒಂದು ಪಾತ್ರೆಯಲ್ಲಿ 2 ಟೀ ಚಮಚ ಎಣ್ಣೆಯನ್ನು ಕಾಯಿಸಿ ಹಾಗೂ ಸಾಸಿವೆ, ಮೆಂತೆ ಬೀಜ, ಒಣ ಮೆಣಸು, ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಕೆಲವು ಕ್ಷಣ ಅವು ಸಿಡಿಯಲು ಬಿಡಿ.
ಹೆಚ್ಚಿದ ಈರುಳ್ಳಿ ಸೇರಿಸಿ, ಮಧ್ಯಮ ಉರಿಯಲ್ಲಿ ಈರುಳ್ಳಿಯು ಪಾರದರ್ಶಕವಾಗುವ ತನಕ ಹುರಿದುಕೊಳ್ಲಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷಗಳ ಕಾಲ ಹುರಿಯಿರಿ.
ಅರಿಶಿನ ಪುಡಿ, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಹೆಚ್ಚಿದ ಟೊಮಾಟೊಗಳನ್ನು ಸೇರಿಸಿ. 4 ರಿಂದ 5 ನಿಮಿಷಗಳ ಕಾಲ ಅಥವಾ ಟೊಮಾಟೋ ಮೃದವಾಗುವ ತನಕ ಮಧ್ಯಮ ಉರಿಯಲ್ಲಿ ಬೇಯಿಸಿ.
250 ಮಿ.ಲಿ. ನೀರು ಸೇರಿಸಿ. ಅದು 5 ರಿಂದ 8 ನಿಮಿಷಗಳಷ್ಟು ಕಾಲ ಕುದಿಯಲಿ.
100 ಮಿ.ಲಿ. ಹುಣಿಸೆ ಸಾರ ಮತ್ತು 250 ಮಿ.ಲಿ. ನೀರು ಸೇರಿಸಿ, ಅದನ್ನು ಕುದಿತಕ್ಕೆ ತನ್ನಿ ಮತ್ತು 5 ನಿಮಿಷಗಳವರೆಗೆ ಕುದಿಯಲು ಬಿಡಿ.
ಈಗ, ಪಾತ್ರೆಯಲ್ಲಿ ಎಚ್ಚರಿಕೆಯಿಂದ ಮೀನಿನ ತುಂಡುಗಳನ್ನು ಇರಿಸಿ ಹಾಗು ಹಸಿ ಮೆಣಸು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
ಅದನ್ನು ಚಮಚದಲ್ಲಿ ಮಿಶ್ರ ಮಾಡುವ ಬದಲಿಗೆ, ಮೀನುಗಳು ತುಂಡಾಗದಂತೆ ಪಾತ್ರೆಯನ್ನು ಚೆನ್ನಾಗಿ ಅಲ್ಲಾಡಿಸಿ.
ಮುಚ್ಚಳ ಮುಚ್ಚಿ, ಮೀನಿನ ಕರ್ರಿ ಬೇಯುವ ತನಕ, 10 ರಿಂದ 12 ನಿಮಿಷಗಳ ಕಾಲ ಬೇಯಿಸಿ. ನಡುನಡುವೆ ಪಾತ್ರೆಯನ್ನು ತಿರುಗಿಸಿ ಮತ್ತು ಅದನ್ನು ಸ್ವಲ್ಪ ಅಲ್ಲಾಡಿಸಿ.
ಕರ್ರಿಯು ಮಂದತೆಗೆ ಬರುವವರೆಗೆ ಮತ್ತು ಹುಣಿಸೆಯ ಕಚ್ಚಾ ರುಚಿ ಹೋಗುವವರೆಗೂ ಬೇಯಿಸಿ.
ಉರಿಯನ್ನು ಕಡಿಮೆ ಮಾಡಿ, ಉಪ್ಪು ಸೇರಿಸಿ ಮುಚ್ಚಿ ಮತ್ತು 10 ರಿಂದ 12 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಸಾಸ್ ದಪ್ಪವಾಗಲಿ ಮತ್ತು ಎಣ್ಣೆ ಬೇರೆಯಾಗುವ ತನಕ ಬೇಯಿಸಿ.
ಉಪ್ಪನ್ನು ಸರಿ ಮಾಡಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಪುನಃ ಅಲಂಕರಿಸಿ.
ಈ ರುಚಿಕರವಾದ ಆಂಧ್ರ ಚೇಪಲ ಪುಲುಸು (ಫಿಶ್ ಕರ್ರಿ) ಯನ್ನು ಅನ್ನ ಅಥವಾ ರಾಗಿ ಸಂಕಟಿ/ರಾಗಿ ಸಂಗತ್ ಜೊತೆಗೆ ಬಡಿಸಿ.