Humrahi

ಹೃದಯ ವೈಫಲ್ಯವನ್ನು ತಡೆಯಬಹುದೇ? ಜೀವನಶೈಲಿ ಮಾರ್ಪಾಡುಗಳು ಮತ್ತು ಅಪಾಯ ಕಡಿತ

ಹೃದಯ ವೈಪಲ್ಯಕ್ಕೆ ಕಾರಣವಾಗುವ ಕೆಲವು ಅಂಶಗಳು ಉದಾಹರಣೆಗೆ ವಂಶವಾಹಿ ಮತ್ತು ವಯಸ್ಸು ನಮ್ಮ ನಿಯಂತ್ರಣಕ್ಕೆ ಮೀರಿದ್ದಾಗಿರಬಹುದು, ಆದರೆ ಜೀವನಶೈಲಿಯ ಮಾರ್ಪಾಡುಗಳು ಈ ಮಾರಣಾಂತಿಕ ಸ್ಥಿತಿ ಅಭಿವೃದ್ಧಿಯಾಗುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಸೂಚಿಸುವ ಪುರಾವೆಗಳಿವೆ.

ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ, ಹೃದಯ ವೈಫಲ್ಯವನ್ನು ತಡೆಗಟ್ಟಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಉತ್ತೇಜಿಸಲು ನಾವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬಹುದು. ತೆಗೆದುಕೊಳ್ಳಬಹುದಾದ ಕ್ರಮಗಳು ಈ ಕೆಳಗಿನಂತಿವೆ:

  1. ಹೃದಯಕ್ಕೆ ಉತ್ತಮವಾದ ಆಹಾರಕ್ರಮವನ್ನು ಕಾಯ್ದುಕೊಳ್ಳಿ
  2. ನಿಯಮಿತ ವ್ಯಾಯಾಮ ದಿನಚರಿಯ ಭಾಗವಾಗಲಿ
  3. ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯಪಾನವನ್ನು ಮಿತಿಗೊಳಿಸಿ
  4. ಯೋಗ ಮತ್ತು ಧ್ಯಾನದ ಮೂಲಕ ಒತ್ತಡವನ್ನು ನಿಯಂತ್ರಿಸಿ
  5. ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಿ
  6. ನಿಮ್ಮ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಪರಿಶೀಲಿಸುತ್ತಿರಿ

ಹೃದಯ ವೈಫಲ್ಯದ ಎಲ್ಲಾ ಅಪಾಯಕಾರಿ ಅಂಶಗಳನ್ನು ನಾವು ನಿಯಂತ್ರಿಸಲು ಸಾಧ್ಯವಾಗದಿದ್ದರೂ, ಜೀವನಶೈಲಿಯ ಮಾರ್ಪಾಡುಗಳು ಈ ಸ್ಥಿತಿ ಅಭಿವೃದ್ಧಿಯಾಗುವ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ನಮ್ಮ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೂಲಕ ಮತ್ತು ಧನಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ನಮ್ಮ ಹೃದಯವನ್ನು ರಕ್ಷಿಸಿಕೊಳ್ಳಬಹುದು ಮತ್ತು ದೀರ್ಘ, ಆರೋಗ್ಯಕರ ಜೀವನವನ್ನು ಆನಂದಿಸಬಹುದು.

ಉಲ್ಲೇಖಗಳು:

  1. Martínez-González MA, et al. (2014). Mediterranean diet and the incidence of cardiovascular disease: A Spanish cohort. https://www.ncbi.nlm.nih.gov/pubmed/24615338
  2. American Heart Association. Recommendations for Physical Activity in Adults and Kids. https://www.heart.org/en/healthy-living/fitness/fitness-basics/aha-recs-for-physical-activity-in-adults
  3. Schneiderman N, et al. (2005). Stress and health: Psychological, behavioral, and biological determinants. https://www.ncbi.nlm.nih.gov/pmc/articles/PMC2568977/