ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) [ಹೆಚ್ಚಿದ್ದು] – 50 ಗ್ರಾಂ
ಮೊಟ್ಟೆಯ ಬಿಳಿ ಭಾಗ [ಬೇಯಿಸಿದ್ದು] - 2 (30ಗ್ರಾಂ)
ಉಪ್ಪು - ರುಚಿಗೆ ತಕ್ಕಷ್ಟು
ಕರಿಮೆಣಸು - ರುಚಿಗೆ ತಕ್ಕಷ್ಟು
ಜಲಪೆನೊ – ರುಬ್ಬಿದ್ದು (20ಗ್ರಾಂ)
ತುಳಸಿ ಎಲೆಗಳು [ಹೆಚ್ಚಿದ್ದು] - 1 ಟೀ ಚಮಚ
ಪೌಷ್ಟಿಕಾಂಶ ಮೌಲ್ಯ:
ಕ್ಯಾಲರಿಗಳು – 92.5ಕ್ಯಾಲರಿ ಪ್ರೊಟೀನ್ – 6.4 ಗ್ರಾಂ
ಮಾಡುವ ವಿಧಾನ:
ಮೊಟ್ಟೆಗಳನ್ನು 10 ನಿಮಿಷಗಳ ಕಾಲ ಬೇಯಿಸಿ. ಸಿಪ್ಪೆ ಸುಲಿದು ಹಳದಿ ಭಾಗಗಳನ್ನು ಪ್ರತ್ಯೇಕ ಮಾಡಿ ಬೇರೆ ಬೇರೆಯಾಗಿ ಇರಿಸಿ.
ಅವಕಾಡೊಗಳನ್ನು ಅರ್ಧ ಮಾಡಿ ಅವುಗಳ ಗುಳಿಗಳನ್ನು ತೆಗೆಯಿರಿ ಅವಕಾಡೊದ ತಿರುಳನ್ನು ಒಂದು ಬಟ್ಟಲಿಗೆ ಹಾಕಿ, ಹೆಚ್ಚಿದ ಈರುಳ್ಳಿ, ಟೊಮಾಟೊ, ಜಲಪೆನೊ, ಉಪ್ಪು ಕರಿಮೆಣಸು ಸೇರಿಸಿ ತಾಜಾ ಲಿಂಬೆಯನ್ನು ಕಿವುಚಿರಿ. ಅವಕಾಡೊ ಪೂರ್ತಿಯಾಗಿ ಮ್ಯಾಶ್ ಆಗಿ, ಸಾಮಗ್ರಿಗಳೆಲ್ಲ ಒಂದಾಗುವ ತನಕ ಫೋರ್ಕ್‌ನಿಂದ ಮಿಶ್ರ ಮಾಡಿ.
ಹಳದಿ ಭಾಗದ ಜಾಗದಲ್ಲಿ ಗ್ವಾಕಮೋಲ್ ಹಾಕಿ. ತಾಜಾ ತುಳಸಿ ಎಲೆಗಳಿಂದ ಅಲಂಕರಿಸಿ.