ಒಂದು ದೊಡ್ಡ ಬೌಲ್ನಲ್ಲಿ ಗೋಧಿ ನುಚ್ಚು, ಹಸಿರುಕಾಳು, ಮಸೂರ್ ದಾಲ್, ಉದ್ದಿನ ಬೇಳೆ ಮತ್ತು ಮೆಂತೆಯನ್ನು ಹಾಕಿ 2 ಗಂಟೆಗಳ ಕಾಲ ನೆನೆಸಿ ನೀರು ಬಸಿದುಕೊಳ್ಳಿ
ಇದನ್ನು ಮಿಕ್ಸರ್ಗೆ ಹಾಕಿ ಸುಮಾರು 3/4 ಕಪ್ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ
ಇದನ್ನು ಒಂದು ಮಿಕ್ಸಿಂಗ್ ಬೌಲ್ಗೆ ಹಾಕಿ, ಈ ಮಿಶ್ರಣಕ್ಕೆ ಈರುಳ್ಳಿ, ಹಿಂಗು, ಶುಂಠಿ-ಹಸಿಮೆಣಸಿನ ಪೇಸ್ಟ್, ಕೊತ್ತಂಬರಿ ಸೊಪ್ಪು, ಅರಿಶಿನ, ಕರಿಬೇವಿನ ಎಲೆಗಳು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
ನಾನ್-ಸ್ಟಿಕ್ ತವಾ (ಕಾವಲಿ) ಒಂದನ್ನು ಬಿಸಿ ಮಾಡಿ, ಅದರ ಮೇಲೆ ಸ್ವಲ್ಪ ನೀರು ಚುಮುಕಿಸಿ ಮತ್ತು ಬಟ್ಟೆಯಿಂದ ಅದನ್ನು ಹಗುರವಾಗಿ ಒರೆಸಿಕೊಳ್ಳಿ
ಒಂದು ಸೌಟಿನಷ್ಟು ಹಿಟ್ಟನ್ನು ತೆಗೆದುಕೊಂಡು ಕಾವಲಿಗೆ ಹಾಕಿ 125 mm (5″) ವ್ಯಾಸ ತೆಳ್ಳಗಿನ ದೋಸೆಯಾಕಾರಕ್ಕೆ ವೃತ್ತಾಕಾರವಾಗಿ ಹರಡಿಕೊಳ್ಳಿ
ಇದರ ಮೇಲೆ 1/8 tsp ಎಣ್ಣೆ ಸವರಿ, ಎರಡೂ ಬದಿಗಳಲ್ಲಿ ಕಂದು ಬಣ್ಣ ಬರುವ ತನಕ ಮಧ್ಯಮ ಉರಿಯಲ್ಲಿ ಮುಚ್ಚಿಡಿ.
ದೋಸೆಯನ್ನು ಮಡಚಿ ತೆಗೆಯಿರಿ, ಹಾಗೂ ಇದೇ ರೀತಿ 23 ದೋಸೆಗಳನ್ನು ತಯಾರಿಸಿ