ಹೃದಯಾಘಾತವನ್ನು ಅನುಭವಿಸುವುದು ಜೀವನದ ಗತಿಯನ್ನು ಬದಲಿಸುವ ಘಟನೆಯಾಗಿದ್ದು, ಅನೇಕ ವ್ಯಕ್ತಿಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಿ ಕಾರ್ಯವಹಿಸುತ್ತದೆ.
ಇದು ಏಕೆ ಮುಖ್ಯ?
- ಅಧಿಕ ಕೊಲೆಸ್ಟ್ರಾಲ್‌ನಿಂದ ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆಯು ಸಂಗ್ರಹವಾಗುತ್ತದೆ
- ಅಂತಿಮವಾಗಿ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.
- ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಭಾಯಿಸುವುದರಿಂದ ಭವಿಷ್ಯದಲ್ಲಿ ಹೃತ್ಸಂಬಂಧೀ ಘಟನೆಗಳಾಗಂತೆ ತಡೆಗಟ್ಟಬಹುದು.s
ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಪ್ರಾಯೋಗಿಕ ಸಲಹೆಗಳು
- ಹೃದಯಕ್ಕೆ ಆರೋಗ್ಯಕರ ಆಹಾರಕ್ರಮವನ್ನು ಅಪ್ಪಿಕೊಳ್ಳುವುದು:
ಹೆಚ್ಚು ಹಣ್ಣುಗಳು, ತರಕಾರಿಗಳು, ಪೂರ್ಣ ಧಾನ್ಯಗಳು, ಲಘು ಪ್ರೋಟೀನ್ ಕಾಯಿಗಳು, ಬೀಜಗಳು, ಮತ್ತು ಆಲಿವ್ ಎಣ್ಣೆಯನ್ನು ಅಳವಡಿಸಿಕೊಳ್ಳಿ. ಕೆಂಪು ಮಾಂಸ, ಕರಿದ ಆಹಾರಗಳು, ಮತ್ತು ಪೂರ್ಣ-ಕೊಬ್ಬಿನ ಹೈನು ಉತ್ಪನ್ನಗಳನ್ನು ಸೀಮಿತಗೊಳಿಸಿ.
- ನಿಯಮಿತ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ:
ನಿಮ್ಮ ಹೃದಯ ಬಡಿತದ ದರವನ್ನು ಹೆಚ್ಚಿಸುವಂತಹ ಕ್ಷಿಪ್ರ ನಡಿಗೆ, ಈಜು, ಸೈಕ್ಲಿಂಗ್, ಅಥವಾ ಯಾವುದೇ ರೀತಿಯ ಏರೋಬಿಕ್ ವ್ಯಾಯಾಮವನ್ನು ನಿಯಮಿತವಾಗಿ ಮಾಡಿ.
- ಔಷಧೋಪಚಾರಕ್ಕೆ ಬದ್ಧರಾಗಿರಿ:
ಔಷಧೋಪಚಾರವನ್ನು ಸೂಚಿಸಿದ್ದರೆ, ಅವುಗಳನ್ನು ನಿರ್ದೇಶಿಸಿದಂತೆ ತೆಗೆದುಕೊಳ್ಳಿ, ಮತ್ತು ವೈದ್ಯಕೀಯ ಸಲಹೆ ಇಲ್ಲದೆ ನಿಲ್ಲಿಸಬೇಡಿ. ಸ್ಟಾಟಿನ್‌ಗಳಂತಹ ಔಷಧಿಗಳು ಕೊಲೆಸ್ಟ್ರಾಲ್2ನ್ನು ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿಯಾಗಬಹುದು.2.
- ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯ ಸೇವನೆಯನ್ನು ಸೀಮಿತಗೊಳಿಸಿ::
ಧೂಮಪಾನ ಮತ್ತು ಮದ್ಯಪಾನವನ್ನು ಅತಿಯಾಗಿ ಸೇವಿಸಿದರೆ, ಅದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು, ಹಾಗಾಗಿ ಧೂಮಪಾನವನ್ನು ತ್ಯಜಿಸಲು ಮತ್ತು ಮದ್ಯ ಸೇವನೆಯನ್ನು ಸೀಮಿತಗೊಳಿಸಲು ಬೆಂಬಲ ಪಡೆಯಿರಿ.
ಉಲ್ಲೇಖಗಳು:
- Gencer B, Giugliano RP. Management of LDL-cholesterol after an acute coronary syndrome: Key comparisons of the American and European clinical guidelines to the attention of the healthcare providers. Clin Cardiol. 2020;43(7):684-690.
- Million Hearts. https://millionhearts.hhs.gov/about-million-hearts/optimizing-care/cholesterol-management.html. Accessed 26June 2023