ಡಿಸ್ಲಿಪಿಡೆಮಿಯವನ್ನು ನಿಯಂತ್ರಿಸದಿದ್ದರೆ, ಅದು ಆರೋಗ್ಯದ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಬಹುದು. ಡಿಸ್ಲಿಪಿಡೆಮಿಯದ ಕುರಿತು ಆಗಾಗ್ಗೆ ಕೇಳುವ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ:
Q1:ಡಿಸ್ಲಿಪಿಡೆಮಿಯ ಎಂದರೇನು?
ಉತ್ತರ:ರಕ್ತದಲ್ಲಿ ಅಸಹಜ ಮಟ್ಟದ ಲಿಪಿಡ್‌ಗಳು (ಕೊಬ್ಬುಗಳು), ವಿಶೇಷವಾಗಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಇರುವುದು.
Q2:ಡಿಸ್ಲಿಪಿಡೆಮಿಯದ ಅಪಾಯವನ್ನು ಉಂಟುಮಾಡುವ ಅಂಶಗಳು ಯಾವುವು?
ಉತ್ತರ:ಜಡವಾದ ಜೀವನಶೈಲಿ, ಪಥ್ಯಕ್ರಮದ ಕೊರತೆ, ಬೊಜ್ಜು, ಧೂಮಪಾನ, ಅತ್ಯಧಿಕ ಮದ್ಯ ಸೇವನೆ, ಮತ್ತು ಕೆಲವೊಂದು ಔಷಧೋಪಚಾರಗಳು.
Q3:ಡಿಸ್ಲಿಪಿಡೆಮಿಯವನ್ನು ಹೇಗೆ ಪತ್ತೆ ಮಾಡಬಹುದು?
ಉತ್ತರ:ಲಿಪಿಡ್ ಪ್ರೊಫೈಲ್, ರಕ್ತದಲ್ಲಿರುವ ಒಟ್ಟು ಕೊಲೆಸ್ಟ್ರಾಲ್, LDL, HDL, ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟಗಳನ್ನು ಅಳತೆ ಮಾಡುತ್ತದೆ.
Q4:ಡಿಸ್ಲಿಪಿಡೆಮಿಯವನ್ನು ಔಷಧೋಪಚಾರವಿಲ್ಲದೆ ನಿಭಾಯಿಸಬಹುದೇ?
ಉತ್ತರ:ಜೀವನಶೈಲಿಯನ್ನು ಮಾರ್ಪಡಿಸಿಕೊಳ್ಳುವುದರಿಂದ ಡಿಸ್ಲಿಪಿಡೆಮಿಯವನ್ನು ಔಷಧೋಪಚಾರದ ಅಗತ್ಯವಿಲ್ಲದೆ ಪರಿಣಾಮಕಾರಿಯಾಗಿ ನಿಭಾಯಿಸಬಹುದು.
Q5:ಡಿಸ್ಲಿಪಿಡೆಮಿಯಕ್ಕೆ ಇರುವ ಚಿಕಿತ್ಸೆಯ ಆಯ್ಕೆಗಳು ಯಾವುವು?
ಉತ್ತರ:ಸ್ಟಾಟಿನ್‌ಗಳು LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ , ಮತ್ತು ಫೈಬ್ರೇಟ್‌ಗಳು ಅಥವಾ ಒಮೇಗಾ-3 ಫ್ಯಾಟಿ ಆಸಿಡ್‌ಗಳು, ಟ್ರೈಗ್ಲಿಸರೈಡ್ ಮಟ್ಟಗಳನ್ನು ಕಡಿಮೆ ಮಾಡುತ್ತವೆ.
Q6:ಡಿಸ್ಲಿಪಿಡೆಮಿಯವನ್ನು ಇಲ್ಲದಂತೆ ಮಾಡಬಹುದೇ?
ಉತ್ತರ:ಅದನ್ನು ಪೂರ್ಣವಾಗಿ ಇಲ್ಲದಂತೆ ಮಾಡಲು ಸಾಧ್ಯವಿಲ್ಲ, ಆದರೆ ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಮತ್ತು ಸೂಕ್ತವಾದ ಔಷಧೋಪಚಾರದ ಮೂಲಕ ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು.
Q7:ಡಿಸ್ಲಿಪಿಡೆಮಿಯಕ್ಕೆ ಸಂಬಂಧಿತವಾದ ಯಾವುದಾದರೂ ಜಟಿಲತೆಗಳಿವೆಯೇ?
ಉತ್ತರ:ಡಿಸ್ಲಿಪಿಡೆಮಿಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅಥೆರೋಸ್ಲೆರೋಸಿಸ್, ಪರಿಧಮನಿಯ ಕಾಯಿಲೆ, ಹೃದಯಾಘಾತಗಳು, ಪಾರ್ಶ್ವವಾಯು, ಮತ್ತು ಬಾಹ್ಯ ಅಪಧಮನಿಯ ಕಾಯಿಲೆಗಳಂತಹ ಜಟಿಲತೆಗಳ ಅಪಾಯ ಹೆಚ್ಚುತ್ತದೆ.
Q8:ಡಿಸ್ಲಿಪಿಡೆಮಿಯವನ್ನು ತಡೆಗಟ್ಟಬಹುದೇ?
ಉತ್ತರ:ವಂಶವಾಹಿಯನ್ನು ಮಾರ್ಪಡಿಸಲು ಸಾಧ್ಯವಿಲ್ಲ, ಆದರೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಅಪಾಯವನ್ನು ಗಮನಾರ್ಹವಾಗಿ ತಗ್ಗಿಸಬಹುದು.
ಉಲ್ಲೇಖ:
1.Pappan N, Rehman A. Dyslipidemia. [Updated 2022 Jul 11]. In: StatPearls [Internet]. Treasure Island (FL): StatPearls Publishing; 2023 Jan-. Available from: https://www.ncbi.nlm.nih.gov/books/NBK560891/
- Ferraro, R.A., Leucker, T., Martin, S.S. et al.Contemporary Management of Dyslipidemia. Drugs82, 559–576 (2022).