ಮನೆಯಲ್ಲಿ ನೀವು ರಕ್ತದೊತ್ತಡವನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದನ್ನು ಇಲ್ಲಿ ಕೊಡಲಾಗಿದೆ:
- ನಿಮ್ಮ ರಕ್ತದೊತ್ತಡವನ್ನು ತೆಗೆದುಕೊಳ್ಳುವ ಮೊದಲು ನೀವು ಆರಾಮವಾಗಿರುವುದನ್ನು ಖಚಿತಪಡಿಸಿಕೊಳ್ಳಿ.
- ನಿಮ್ಮ ಕೈಯನ್ನು, ಮೇಜಿನಂತಹ ಮಟ್ಟಸವಾದ ಒಂದು ಮೇಲ್ಮೈಯ ಮೇಲೆ ಇರಿಸಿ, ನಿಮ್ಮ ಅಂಗೈಯು ಮೇಲ್ಮುಖವಾಗಿರಲಿ.
- ಪಟ್ಟಿಯನ್ನು ನಿಮ್ಮ ತೋಳಿನ ಸುತ್ತಲೂ ಸುತ್ತಿ ಮತ್ತು ಬಲೂನ್ ಅನ್ನು ಹಿಸುಕಿ ಆ ಪಟ್ಟಿಯನ್ನು ಉಬ್ಬಿಸಿ.
- ಅನೆರಾಯ್ಡ್ ಮಾನಿಟರ್‌ನ ಮೌಲ್ಯಗಳನ್ನು ಬಳಸಿಕೊಂಡು, ಪಟ್ಟಿಯನ್ನು ನಿಮ್ಮ ಸಾಮಾನ್ಯ ರಕ್ತದೊತ್ತಡಕ್ಕಿಂತ ಸುಮಾರು 20–30 mm Hg ಯಷ್ಟು ಹೆಚ್ಚಿಗೆ ಉಬ್ಬಿಸಿ.
- ನಿಮ್ಮ ಸಾಮಾನ್ಯ ರಕ್ತದೊತ್ತಡ ಎಷ್ಟು ಎನ್ನುವುದು ನಿಮಗೆ ತಿಳಿದಿರದಿದ್ದರೆ, ಪಟ್ಟಿಯನ್ನು ಎಷ್ಟು ಉಬ್ಬಿಸಬೇಕು ಎಂಬ ಬಗ್ಗೆ ನಿಮ್ಮ ವೈದ್ಯರನ್ನು ಕಾಣಿರಿ.
- ಪಟ್ಟಿಯನ್ನು ಉಬ್ಬಿಸಿದ ಬಳಿಕ, ಸ್ಟೆಥೋಸ್ಕೋಪ್‌ನ ಮಟ್ಟಸ ಭಾಗವನ್ನು ನಿಮ್ಮ ತೋಳಿನ ಒಳಭಾಗದ ನಿಮ್ಮ ಮೊಣಕೈ ಮಡಿಕೆಯ ಮೇಲೆ, ನಿಮ್ಮ ಪ್ರಾಥಮಿಕ ಅಪಧಮನಿ ಇರುವಲ್ಲಿ ಇರಿಸಿ.
- ಸ್ಟೆಥೋಸ್ಕೋಪ್ ಬಳಸುವ ಮೊದಲು, ನಿಮಗೆ ಅದು ಸರಿಯಾಗಿ ಕೇಳಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀವು ಸ್ಟೆಥೋಸ್ಕೋಪ್ ಅನ್ನು ತಟ್ಟಿ ಇದನ್ನು ಖಚಿತಪಡಿಸಿಕೊಳ್ಳಬಹುದು.
- ಉನ್ನತ ಗುಣಮಟ್ಟದ ಸ್ಟೆಥೋಸ್ಕೋಪ್ ಕೂಡ ಪ್ರಯೋಜನವಾಗುತ್ತದೆ.
- ರಕ್ತದ ಹರಿವಿನ ಆರಂಭಿಕ "ವೂಶ್" ಸದ್ದನ್ನು ಸ್ಟೆಥೋಸ್ಕೋಪ್ ಮೂಲಕ ಕೇಳಿಸಿಕೊಳ್ಳುತ್ತಾ ಬಲೂನ್ ಅನ್ನು ನಿಧಾನವಾಗಿ ಕುಗ್ಗಿಸಿ. ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ ಅಥವಾ ನೆನಪಿಟ್ಟುಕೊಳ್ಳಿ. ಅದು ನಿಮ್ಮ ಸಿಸ್ಟಾಲಿಕ್ ರಕ್ತದೊತ್ತಡ, ಇದನ್ನು ಮೇಲಿನ ಓದಿಕೆ ಎಂದೂ ಹೇಳುವರು.
- ನಿಮಗೆ ರಕ್ತದ ಮಿಡಿತ ಕೇಳಿಸುತ್ತದೆ. ಹಾಗಾಗಿ ಅದನ್ನು ಕೇಳಿಸಿಕೊಳ್ಳುತ್ತಲೇ ಅದರ ಲಯವು ನಿಲ್ಲುವವರೆಗೂ ಬಲೂನ್ ಅನ್ನು ನಿಧಾನವಾಗಿ ಕುಗ್ಗಿಸಿ.
- ಲಯವು ನಿಂತಾಗ ಇರುವ ಅಳತೆಯನ್ನು ತೆಗೆದುಕೊಳ್ಳಿ. ಅದು ನಿಮ್ಮ ಡಯಾಸ್ಟಾಲಿಕ್ ರಕ್ತದೊತ್ತಡ, ಇದನ್ನು ಕೆಳಗಿನ ಓದಿಕೆ ಎಂದೂ ಹೇಳುವರು.