ನಿಮ್ಮ ಸ್ಥಿತಿಯ ಪ್ರಕಾರ ಮತ್ತು ತೀವ್ರತೆಯನ್ನು ಅವಲಂಬಿಸಿ ಹೃದಯ ವೈಫಲ್ಯದ ಲಕ್ಷಣಗಳು ಬದಲಾಗುತ್ತವೆ. ನೀವು ಶ್ರಮದಾಯಕ ದೈಹಿಕ ಚಟುವಟಿಕೆಯನ್ನು ಮಾಡದಿರುವಾಗ, ಸೌಮ್ಯವಾದ ಹೃದಯ ವೈಫಲ್ಯವು ಪತ್ತೆಯಾಗದೆ ಇರಬಹುದು. ನೀವು ಎಡ ಅಥವಾ ಬಲ-ಭಾಗದ ಹೃದಯ ವೈಫಲ್ಯವನ್ನು ಹೊಂದಿದ್ದೀರಾ ಎಂಬುದನ್ನು ಅವಲಂಬಿಸಿ ನಿಮ್ಮ ರೋಗಲಕ್ಷಣಗಳು ಬದಲಾಗಬಹುದು. ಆದರೆ, ಎರಡೂ ರೀತಿಯ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ನಿಮ್ಮ ಹೃದಯವು ದುರ್ಬಲವಾದಂತೆ, ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ. ಹೃದಯ ವೈಫಲ್ಯವು ತೀವ್ರವಾದ, ಕೆಲವೊಮ್ಮೆ ಮಾರಣಾಂತಿಕ ಪರಿಣಾಮಗಳಿಗೆ ಕಾರಣವಾಗಬಹುದು.
ಮುಂಚಿನ ಎಚ್ಚರಿಕೆ ಚಿಹ್ನೆಗಳು/ರೋಗಲಕ್ಷಣಗಳು::
- ಮೆಟ್ಟಿಲುಗಳನ್ನು ಹತ್ತುವಂತಹ ಸಾಮಾನ್ಯ ಕಾರ್ಯಗಳ ಸಮಯದಲ್ಲಿ ಉಸಿರಾಟದ ತೊಂದರೆ ಅನುಭವಿಸುವುದು ನೀವು ಗಮನಿಸಬಹುದಾದ ಮೊದಲ ಚಿಹ್ನೆಗಳಲ್ಲಿ ಒಂದಾಗಿದೆ.
- ಹೃದಯವು ದುರ್ಬಲವಾಗುವುದರಿಂದ, ಬಟ್ಟೆ ಧರಿಸುವಾಗ ಅಥವಾ ಕೋಣೆಯ ಸುತ್ತಲೂ ಚಲಿಸುವಾಗ ಮತ್ತು ಅಂಗಾತ ಮಲಗಿ ವಿಶ್ರಾಂತಿ ಪಡೆಯುವಾಗ ಉಸಿರಾಟದ ತೊಂದರೆಗಳನ್ನು ನೀವು ಗಮನಿಸಬಹುದು.
- ಎಡಭಾಗದ ಹೃದಯ ವೈಫಲ್ಯ: ನಿಮಗೆ ಉಸಿರಾಟದ ತೊಂದರೆ, ಕೆಮ್ಮು, ವಿಶ್ರಾಂತಿಯ ನಂತರವೂ ತೀವ್ರ ಆಯಾಸ, ಸಾಮಾನ್ಯ ದೌರ್ಬಲ್ಯ, ನೀಲಿ ಬೆರಳು ಮತ್ತು ತುಟಿಗಳು, ನಿದ್ರಾಹೀನತೆ ಮತ್ತು ಏಕಾಗ್ರತೆಗೆ ತೊಂದರೆ, ಅಂಗಾತ ಮಲಗಿ ನಿದ್ರೆ ಮಾಡಲು ಸಾಧ್ಯವಾಗದಿರುವುದು
- ಬಲಭಾಗದ ಹೃದಯ ವೈಫಲ್ಯ: ವಾಕರಿಕೆ, ಹಸಿವು ಕಡಿಮೆಯಾಗುವುದು, ಹೊಟ್ಟೆಯ ಪ್ರದೇಶದಲ್ಲಿ ನೋವು, ನಿಮ್ಮ ಹಿಮ್ಮಡಿ, ಪಾದಗಳು, ಕಾಲುಗಳು, ಹೊಟ್ಟೆ ಮತ್ತು ಕತ್ತಿನ ರಕ್ತನಾಳಗಳಲ್ಲಿ ಊತ, ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗುವಂತಾಗುವುದು ಮತ್ತು ತೂಕ ಹೆಚ್ಚಾಗುವುದು.
ನೀವು ಮೇಲಿನ ಒಂದಕ್ಕಿಂತ ಹೆಚ್ಚು ಅಥವಾ ಹೆಚ್ಚಿನ ಚಿಹ್ನೆಗಳು/ರೋಗಲಕ್ಷಣಗಳನ್ನು ಹೊಂದಿದ್ದರೆ, ಅವುಗಳನ್ನು ನಿಮ್ಮ ಆರೋಗ್ಯ ರಕ್ಷಣಾ ತಂಡಕ್ಕೆ ವರದಿ ಮಾಡಿ ಮತ್ತು ನಿಮಗೆ ಯಾವುದೇ ಹೃದಯದ ಸಮಸ್ಯೆಗಳಿಲ್ಲದಿದ್ದರೂ ಸಹ ನಿಮ್ಮ ಹೃದಯದ ಪರೀಕ್ಷೆಯನ್ನು ಮಾಡಲು ವಿನಂತಿಸಿ.
ಉಲ್ಲೇಖ:
- National Heart, Lung and Blood institute. https://www.nhlbi.nih.gov/health/heart-failure.
- American Heart Association. Heart attack and stroke symptoms. https://www.heart.org/en/health-topics/heart-failure/warning-signs-of-heart-failure.
.