ಮಾವಿನ ಹಣ್ಣಿನ ಸಿಪ್ಪೆ ತೆಗೆದು ಕತ್ತರಿಸಿ 3-4 ಗಂಟೆಗಳ ಕಾಲ ಫ್ರೀಝ್ ಮಾಡಿ.
ಇದೇವೇಳೆ, ಮೊಸರನ್ನು ಒಂದು ಹತ್ತಿಯ ಬಟ್ಟೆಯಲ್ಲಿ ಚೆನ್ನಾಗಿ ಸೋಸಿ. ಇದರ ನೀರನ್ನು ಒಂದು ಬೌಲ್ನಲ್ಲಿ ತೆಗೆದಿಟ್ಟು, ಯೋಗರ್ಟ್ನಿಂದ ಹೆಚ್ಚುವರಿ ನೀರು ಹರಿದುಹೋಗಲು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ.
ಈ ಮೊಸರನ್ನು ಫ್ರೋಝನ್ ಮಾವಿನ ಹಣ್ಣಿನ ಜೊತೆಗೆ ಕೇಸರಿ ಮತ್ತು ಏಲಕ್ಕಿ ಹಾಕಿ ನುಣ್ಣಗೆ ಬ್ಲೆಂಡ್ ಮಾಡಿ . ರುಚಿ ನೋಡಿ ಅಗತ್ಯಕ್ಕೆ ತಕ್ಕಷ್ಟು ಜೇನು ಸೇರಿಸಿ.
ಈ ಮಿಶ್ರಣವನ್ನು ಫ್ರೀಝರ್ ಸುರಕ್ಷಿತ ಬಾಕ್ಸ್ನಲ್ಲಿ ಹಾಕಿ ಫ್ರೀಝ್ ಮಾಡಿ ಮುಚ್ಚಳ ಮುಚ್ಚಿ 3 ಗಂಟೆಗಳ ಕಾಲ ಅಥವಾ ಗಟ್ಟಿಯಾಗುವ ತನಕ ಫ್ರೀಝ್ ಮಾಡಿ. ನಂತರ ಫ್ರಿಜ್ನಿಂದ ತೆಗೆದು ಮತ್ತೊಮ್ಮೆ ಬ್ಲೆಂಡರ್ಗೆ ಹಾಕಿ ಐಸ್ ಗಟ್ಟಿಯನ್ನು ತೆಗೆಯಲು ಬ್ಲೆಂಡ್ ಮಾಡಿ. ಈ ಪ್ರಕ್ರಿಯೆಯನ್ನು ಮತ್ತೊಮ್ಮೆ ಪುನರಾವರ್ತಿಸಿ.
ಮೂರನೇ ಬಾರಿ ಫ್ರೀಝ್ ಮಾಡಿದ ನಂತರ ಮ್ಯಾಂಗೋ ಫ್ರಯೋ ಸವಿಯಲು ಸಿದ್ಧ.