ಪಾಲಕ್ ಮತ್ತು ಮೊಟ್ಟೆಯ ಕ್ವೀಷ್
ಬೇಕಾಗುವ ಪದಾರ್ಥಗಳು:
2 ಇಡಿಯಾದ ಮೊಟ್ಟೆ
ಪಾಲಕ್ – 1 ಕಪ್
ಎಣ್ಣೆ/ಕರಗಿಸಲಾದ ಬೆಣ್ಣೆ – 2 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೆಂಪು ಮೆಣಸು – ¼ ಟೀ ಚಮಚ
ಜೋಳ- ¼ ಕಪ್
ಕೆಂಪು ಕ್ಯಾಪ್ಸಿಕಮ್ – ¼ ಕಪ್
ಹಳದಿ ಕ್ಯಾಪ್ಸಿಕಮ್ – ¼ ಕಪ್
ಈರುಳ್ಳಿ – ¼ ಕಪ್
ಪನ್ನೀರು – 20g
ಪೌಷ್ಟಿಕಾಂಶ ಮೌಲ್ಯ:
ಶಕ್ತಿ: 427.5 kcal
ಪ್ರೊಟೀನ್: 41 gm
ಮಾಡುವ ವಿಧಾನ:
- ಪಾಲಕ್ ಅನ್ನು ಬೇಯಿಸಿ ಮತ್ತು ಪ್ಯೂರೆ ಮಾಡಿ.
- ಒಂದು ಬಟ್ಟಲಿನಲ್ಲಿ 2 ಇಡೀ ಮೊಟ್ಟೆಗಳನ್ನು ಸೇರಿಸಿ. ಎಲ್ಲಾ ಕತ್ತರಿಸಿದ ತರಕಾರಿಗಳು ಮತ್ತು ಪಾಲಕ ಪ್ಯೂರೆಯನ್ನು ಸೇರಿಸಿ.
- ಮೊಟ್ಟೆಯನ್ನು ಸರಿಯಾಗಿ ವಿಸ್ಕ್ ಮಾಡಿ.
- ಮೊಟ್ಟೆ ಪಾಲಕ್ ಹಿಟ್ಟಿಗೆ ಚೀಸ್ ಸೇರಿಸಿ.
- ಮಫಿನ್ ಅಚ್ಚುಗಳಿಗೆ ಎಣ್ಣೆ/ಬೆಣ್ಣೆಯನ್ನು ಹಚ್ಚಿ.
- ಹಿಟ್ಟನ್ನು ಮಫಿನ್ ಅಚ್ಚಿಗೆ ಸುರಿಯಿರಿ.
- 200 ಡಿಗ್ರಿಗಳಲ್ಲಿ 15-20 ನಿಮಿಷಗಳ ಕಾಲ ಮೊಟ್ಟೆಗಳನ್ನು ಬೇಕ್ ಮಾಡಿ.