Humrahi

ಅಮರಾಂತ್ ಬರಿಟೋ ಬೌಲ್

ಬೇಕಾಗುವ ಪದಾರ್ಥಗಳು:

  • 1 ಕಪ್ ನೀರು
  • ½ ಕಪ್ ಅಮರಾಂತ್
  • ಬೇಯಿಸಿದ ರಾಜ್ಮಾ ಕಾಳು
  • ಟೊಮೆಟೊ (1/2 ಕಪ್)
  • ಈರುಳ್ಳಿ (1/2 ಕಪ್)
  • ಬೀನ್ಸ್ (1/4 ಕಪ್)
  • ಕ್ಯಾರೆಟ್ (1/4 ಕಪ್)
  • ಕಾರ್ನ್ (1/2 ಕಪ್)
  • ನಿಂಬೆ ರಸ
  • ½ ಕಪ್ ಹುಳಿಯಾದ ಕೆನೆ

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 626 ಕಿಲೋಕ್ಯಾಲರಿ
ಪ್ರೊಟೀನ್: 20.68 ಗ್ರಾಂ

ಮಾಡುವ ವಿಧಾನ:

  • ಮೊದಲಿಗೆ ಒಂದು ಪ್ಯಾನ್‌ನಲ್ಲಿ ಅಮರಾಂತ್ ಹಾಕಿ ಇದಕ್ಕೆ1 ಕಪ್ ನೀರು ಸೇರಿಸಿ ಮಧ್ಯಮ-ಕಡಿಮೆ ಉರಿಯಲ್ಲಿ 20 ನಿಮಿಷಗಳ ಕಾಲ ಆಗಾಗ ಕೈಯಾಡಿಸುತ್ತಾ ಗಂಜಿಯಂತೆ ಬೇಯಿಸಿ. ಸ್ಟವ್‌ನಿಂದ ತೆಗೆದು ಬದಿಯಲ್ಲಿ ಇಡಿ. ಇದು ಸ್ವಲ್ಪ ಹೊತ್ತು ತಣಿಯಲಿ.
  • ಬೀನ್ಸ್, ಕ್ಯಾರೆಟ್ ಮತ್ತು ಕಾರ್ನ್ ಅನ್ನು 2 ಕಪ್ ನೀರಿನಲ್ಲಿ ಬೇಯಿಸಿ, ನೀರು ಬಸಿದು ಬದಿಯಲ್ಲಿಡಿ.
  • ರಾತ್ರಿಯಲ್ಲಿ ನೆನೆಹಾಕಿದ ರಾಜ್ಮಾಕಾಳನ್ನು ½ ಚಮಚ ಉಪ್ಪು ಸೇರಿಸಿ 5 ಸೀಟಿ ಕೂಗುವ ತನಕ ಬೇಯಿಸಿ. ಒಂದು ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಇದಕ್ಕೆ ರಾಜ್ಮಾ ಮತ್ತು ಮಸಾಲೆಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿ. ಆಲೂಗಡ್ಡೆ ಮ್ಯಾಶರ್‌ನಿಂದ ಈ ಮಿಶ್ರಣವನ್ನು ಮ್ಯಾಶ್ ಮಾಡಿ.
  • ಸಾಲ್ಸಾ ಮಾಡುವ ವಿಧಾನ– ಈರುಳ್ಳಿ, ಟೊಮೆಟೋ, ನಿಂಬೆ ರಸ, ಉಪ್ಪು, ಕಾಳುಮೆಣಸು, ಮೆಣಸಿನ ಹುಡಿ ಸೇರಿಸಿ ಮಿಶ್ರಣವನ್ನು ಸಿದ್ಧಪಡಿಸಿ. ಚಮಚದ ಹಿಂಭಾಗದಿಂದ ಎಲ್ಲವನ್ನೂ ಮ್ಯಾಶ್ ಮಾಡಿ ಮಿಶ್ರಣ ಮಾಡಿ.
  • ಬರಿಟೋಸ್ ಬೌಲ್ ತಯಾರಿಸಲು, ರಾಜ್ಮಾಕಾಳು, ಬೇಯಿಸಿದ ಅಮರಾಂತ್, ಹುಳಿಯಾದ ಕೆನೆ ಮತ್ತು ಸಾಲ್ಸಾ ಅನ್ನು 4 ಸಮಭಾಗಗಳಾಗಿ ಮಾಡಿ. ಸರ್ವ್ ಮಾಡುವಾಗ, ಮೊದಲನೇ ಪದರದಲ್ಲಿ ಅಮರಾಂತ್ ಹಾಕಿ, ನಂತರ ರಾಜ್ಮಾ ಸೇರಿಸಿ ಅದರ ಮೇಲೆ ಸಾಲ್ಸಾ ಮತ್ತು ಹುಳಿ ಕೆನೆಯ ಟಾಪಿಂಗ್ ಮಾಡಿ. ಈ ವಿಧಾನವನ್ನು ಪುನರಾವರ್ತಿಸಿ ಬಿಸಿಯಾಗಿ ಸರ್ವ್ ಮಾಡಿ.

ನಿಮಗೂ ಇಷ್ಟವಾಗಬಹುದು