Humrahi

ಅವೊಕಾಡೋ ಮತ್ತೂ ಹೂಕೋಸು ಹಮ್ಮಸ್

ಬೇಕಾಗುವ ಪದಾರ್ಥಗಳು:

ಬೇಯಿಸಿದ ಕಾಬೂಲ್ ಕಡಲೆ – 1 ಕಪ್
ಅವೊಕಾಡೋ – 1 ಮಧ್ಯಮ ಗಾತ್ರ
ಹೂಕೋಸು – 1 ಮಧ್ಯಮ ಗಾತ್ರ size
ಎಳ್ಳು- 1 ಕಪ್ (ತಹಿನಿ ಮಾಡಲು)
ಆಲಿವ್ ಎಣ್ಣೆ – 1 tbsp
ನಿಂಬೆ ರಸ – 2 tsp
3 ಬೆಳ್ಳುಳ್ಳಿ ಎಸಳು
ಜೀರಿಗೆ ಹುಡಿ – ¼ tsp
ಉಪ್ಪು– ರುಚಿಗೆ ತಕ್ಕಷ್ಟು
ಕಾಳು ಮೆಣಸು – ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನ ಚೂರುಗಳು – ಟಾಪಿಂಗ್‌ಗಾಗಿ

ಪೌಷ್ಟಿಕಾಂಶ ಮೌಲ್ಯ:

ಶಕ್ತಿ: 180 ಕಿಲೋಕ್ಯಾಲರಿ
ಪ್ರೊಟೀನ್: 14.5 ಗ್ರಾಂ

ಮಾಡುವ ವಿಧಾನ:

  • ತಹಿನಿ ತಯಾರಿಸಲು, ಎಳ್ಳನ್ನು ಹುರಿದು, ಕುಟ್ಟಿ ಪುಡಿ ಮಾಡಿ, ಇದಕ್ಕೆ ½ ಟೇಬಲ್‌ಸ್ಪೂನ್ ಆಲಿವ್ ಎಣ್ಣೆ ಸೇರಿಸಿ ನಯವಾದ ಪೇಸ್ಟ್ ತಯಾರಿಸಿ.
  • ಫುಡ್ ಪ್ರೊಸೆಸರ್‌ಗೆ, ಕಾಬೂಲ್ ಕಡಲೆ, ತಹಿನಿ, ನಿಂಬೆರಸ, ಜೀರಿಗೆ ಪುಡಿ, ಬೆಳ್ಳುಳ್ಳಿ ಎಸಳು ಮತ್ತು ಸ್ಪಲ್ಪ ಐಸ್ ಕ್ಯೂಬ್‌ಗಳನ್ನು ಸೇರಿಸಿ, ನಯವಾದ ಪೇಸ್ಟ್ ತಯಾರಿಸಿ.
  • ಬೇಕಾದ ಹದಕ್ಕೆ ಬರುವ ತನಕ ಒಂದು ಟೇಬಲ್‌ಸ್ಪೂನ್‌ನಷ್ಟು ಎಣ್ಣೆಯನ್ನು ನಿಧಾನಕ್ಕೆ ಸೇರಿಸುತ್ತಿರಿ.
  • ಇದಕ್ಕೆ ಉಪ್ಪು ಮತ್ತು ಕಾಳು ಮೆಣಸು ಸೇರಿಸಿ. ಈಗ ಬೇಸ್ ಸಿದ್ಧವಾಯಿತು
  • ಅವೊಕಾಡೋ ಮಿಶ್ರಣ ತಯಾರಿಸಲು, ಸಿಪ್ಪೆ ತೆಗೆದು ಕತ್ತರಿಸಿದ ಅವೊಕಾಡೋ ಅನ್ನು ಈ ಬೇಸ್‌ಗೆ ಸೇರಿಸಿ ಬ್ಲೆಂಡ್ ಮಾಡಿ ನಯವಾದ ಪೇಸ್ಟ್ ತಯಾರಿಸಿಕೊಳ್ಳಿ.
  • ಇದನ್ನು ಸರ್ವಿಂಗ್ ಬೌಲ್‌ಗೆ ಹಾಕಿ ಮೇಲಿನಿಂದ ಆಲಿವ್ ಎಣ್ಣೆ ಮತ್ತು ಚಿಲ್ಲಿ ಫ್ಲೇಕ್‌ಗಳನ್ನು ಉದುರಿಸಿ.
  • ಹೂಕೋಸಿನ ಮಿಶ್ರಣ ತಯಾರಿಸಲು, ಪ್ರೀಹೀಟಡ್ ಓವೆನ್‌ನಲ್ಲಿ, ಹೂಕೋಸು, ಉಪ್ಪು ಮತ್ತು ಕಾಳು ಮೆಣಸು ಸೇರಿಸಿ ಟಾಸ್ ಮಾಡಿ.
  • 20-25 ನಿಮಿಷಗಳ ಕಾಲ ಚೆನ್ನಾಗಿ ಬೇಯುವ ತನಕ ಬೇಕ್ ಮಾಡಿ. (ಹೂಕೋಸ್ ಅನ್ನು ಬೇಕ್ ಮಾಡುವುದಕ್ಕೆ ಬದಲಾಗಿ ರೋಸ್ಟಿಂಗ್ ರ್‍ಯಾಕ್‌ನಲ್ಲೂ ರೋಸ್ಟ್ ಮಾಡಬಹುದು). ಇದನ್ನು ತಣಿಯಲು ಬಿಡಿ.
  • ರೋಸ್ಟ್ ಮಾಡಿದ ಹೂಕೋಸನ್ನು ಬೇಸ್‌ಗೆ ಸೇರಿಸಿ ನಯವಾದ ಪೇಸ್ಟ್ ತಯಾರಿಸಿ.
  • ಇದನ್ನು ಸರ್ವಿಂಗ್ ಬೌಲ್‌ಗೆ ಹಾಕಿ ಮೇಲಿನಿಂದ ಆಲಿವ್ ಎಣ್ಣೆ ಮತ್ತು ಚಿಲ್ಲಿ ಫ್ಲೇಕ್‌ಗಳನ್ನು ಉದುರಿಸಿ.

ನಿಮಗೂ ಇಷ್ಟವಾಗಬಹುದು