ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು ಹೃದ್ರೋಗದ ಮತ್ತು ಇತರ ಹೃದಯರಕ್ತನಾಳ ಸಂಬಂಧಿತ ಸ್ಥಿತಿಗಳ ಅಪಾಯವನ್ನು ಹೆಚ್ಚಿಸಲು ಕಾರಣವಾಗಬಹುದು. ಆದ್ದರಿಂದ, ನೀವು ತಿನ್ನುವ ಆಹಾರಗಳ ವಿಧಗಳಿಗೆ ಗಮನ ನೀಡುವುದು ಮುಖ್ಯವಾಗಿದೆ. ವ್ಯಕ್ತಿಗಳ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡಲು ಸಹಾಯಕವಾಗುವಂತಹ ಮತ್ತು ವ್ಯಕ್ತಿಯು ಅನುಸರಿಸಲು ಸಾಧ್ಯವಾಗುವಂತಹ ಎಂಟು ಪೋಷಕಾಂಶದ ಸಲಹೆಗಳನ್ನು ಕೆಳಗೆ ನೀಡಲಾಗಿದೆ.
- ಆವಕಾಡೋಗಳು, ಆಲಿವ್ ಎಣ್ಣೆ, ಕಾಯಿಗಳು ಮತ್ತು ಬೀಜಗಳು HDL (ಉತ್ತಮ) ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡಬಹುದು.
- ಓಟ್ಸ್, ಕೆಂಪಕ್ಕಿ, ಮತ್ತು ಕ್ವಿನೋವದಂತಹ ಪೂರ್ಣ ಧಾನ್ಯಗಳನ್ನು, ಹಾಗೆಯೇ ಹಣ್ಣುಗಳು, ತರಕಾರಿಗಳು, ಮತ್ತು ದ್ವಿದಳ ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.
- ಅಧಿಕ ಕೊಬ್ಬಿನಂಶವಿರು ಮಾಂಸದ ಸ್ಥಾನದಲ್ಲಿ ಚರ್ಮರಹಿತ ಕೋಳಿ, ಮೀನು, ಟೋಫು, ಮತ್ತು ದ್ವಿದಳ ಧಾನ್ಯಗಳಂತಹ ಲಘು ಪ್ರೋಟೀನ್ ಮೂಲಗಳನ್ನು ತನ್ನಿ.
- ಸಾಲ್ಮನ್, ಟ್ರೌಟ್, ಮತ್ತ ಮಕ್ಕರೆಲ್‌ಗಳಂತಹ ಕೊಬ್ಬಿನಂಶದ ಮೀನುಗಳು ಅಥವಾ ಮೀನಿನ ಎಣ್ಣೆ ಅಥವಾ ಒಮೇಗಾ-3 ಫ್ಯಾಟಿ ಆಸಿಡ್ ಪೂರಕಗಳು ಆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
- ಸಂಸ್ಕರಿತ ಮತ್ತು ಕರಿದ ಆಹಾರಗಳ, ಪೇಸ್ಟ್ರಿಗಳ ಮತ್ತು ಮಾಂಸದ ಕೊಬ್ಬಿನ ಭಾಗಗಳ ಸೇವನೆಯನ್ನು ಕಡಿಮೆ ಮಾಡಿ.
- ಆಂಟಿ ಆಕ್ಸಿಡೆಂಟ್‌ಗಳು, ನಾರುಯುಕ್ತ ಆಹಾರ, ಮತ್ತು ಹೃದಯಕ್ಕೆ ಆರೋಗ್ಯಕರವಾದ ಇತರ ಪೋಷಕಾಂಶಗಳನ್ನು ಸೇವಿಸಿ. ಬೆರ್ರಿಗಳು, ಹಸಿರೆಲೆಗಳು, ಸಿಟ್ರಸ್ ಹಣ್ಣುಗಳು, ಬ್ರಕೋಲಿ, ಮತ್ತು ಮೊಳಕೆಕಾಳುಗಳನ್ನು ಸೇರಿಸಿಕೊಳ್ಳಿ.
- ಭಾಗಗಳ ಗಾತ್ರಗಳಿಗೆ ಗಮನ ನೀಡಿ: ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ಚಿಕ್ಕ ತಟ್ಟೆಗಳನ್ನು ಬಳಸಿ.
- ಸಂಸ್ಕರಿತ ಆಹಾರ, ಸಕ್ಕರೆ ತಿಂಡಿಗಳು, ಮತ್ತು ಸಿಹಿ ಪಾನೀಯಗಳ ಸೇವನೆಯನ್ನು ಕನಿಷ್ಠಗೊಳಿಸಿ.
ನಿಮ್ಮ ಆಹಾರ ಸೇವನೆಯ ಅಭ್ಯಾಸಗಳಲ್ಲಿ ಚಿಕ್ಕಚಿಕ್ಕ ಆದರೆ ಗಮನಾರ್ಹವಾದ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ, ನೀವೇ ಮುಂದಾಗಿ ನಿಮ್ಮ ಹೃದಯದ ಆರೋಗ್ಯವನ್ನು ಮತ್ತು ಒಟ್ಟಾರೆ ಕ್ಷೇಮವನ್ನು ಸುಧಾರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬಹುದು.
ಉಲ್ಲೇಖಗಳು:
- Mayo Clinic Staff. (2022, April 28). 8 steps to a heart-healthy diet. Mayo Clinic. https://www.mayoclinic.org/diseases-conditions/heart-disease/in-depth/heart-healthy-diet/art-20047702. Accessed on 26June 2023
- American Heart Association. (2021, November 1). The American Heart Association’s Diet and Lifestyle Recommendations. Www.heart.org. https://www.heart.org/en/healthy-living/healthy-eating/eat-smart/nutrition-basics/aha-diet-and-lifestyle-recommendations. Accessed on 26June 2023
- Heart-Healthy Living – Choose Heart-Healthy Foods | NHLBI, NIH. (2022, March 24). Www.nhlbi.nih.gov. https://www.nhlbi.nih.gov/health/heart-healthy-living/healthy-foods. Accessed on 26 June 2023